ಪೆನ್‌ಡ್ರೈವೂ ಶೇವ್ ಮಾಡುತ್ತೆ! ಜನವಸತಿ ಇಲ್ಲದ ಕಟಿಂಗ್‌ಶಾಪೇ ಇಲ್ಲದ ಸ್ಥಳದಲ್ಲಿ ನೀವಿದ್ದೀರಿ, ಎರಡು-ಮೂರು ದಿನದಿಂದ. ಲೈಟಾಗಿ ಗಡ್ಡ ಬಂದಿದೆ. ಇದರಿಂದ ಮನಸ್ಸಿಗೇನೋ ಕಿರಿಕಿರಿ. ಶೇವಿಂಗ್ ಮಾಡಬೇಕು ಅಲ್ಲಿ ಶೇವಿಂಗ್ ಶಾಪ್ ಇಲ್ಲ. ಲಗ್ಗೇಜ್ ಆಗುತ್ತೆ ಅಂತ ಇನ್ನೂರು ಗ್ರಾಮಿನ ಶೇವಿಂಗ್ ಸೆಟ್‌ಬಾಕ್ಸ್ ಅನ್ನೂ ತಂದಿಲ್ಲ. ಈ ವೇಳೆ ಒಂದು ಪೆನ್‌ಡ್ರೈವ್ ಇದ್ದರೆ? ಅರೆ! ಪೆನ್‌ಡ್ರೈವಿಗೂ ಈ ಗಡ್ಡಕ್ಕೂ ಏನ್ ಸಂಬಂಧ? ಇದೆ. ಈ ಸಂಬಂಧ ಈಗ ಕುದುರಿದೆ. 'ಶೇವ್‌ಟಚ್‌' ಪೆನ್‌ಡ್ರೈವ್‌ನಿಂದ ನೀವು ನೀಟಾಗಿ ಶೇವಿಂಗ್ ಮಾಡಿಕೊಳ್ಳಬಹುದು. ಅಲ್ಲದೆ, ಕನೆಕ್ಟರ್ ಆಗಿಯೂ ಬಳಸಬಹುದು. ಸ್ಮಾರ್ಟ್‌ಫೋನ್ ಅಥವಾ ಬಿಸ್ಕೇಟಿನ ಆಕಾರದಲ್ಲಿರುವ ಈ ಪೆನ್‌ಡ್ರೈವ್ ಸದ್ವಿನಿಯೋಗವಾಗಬೇಕಾದರೆ ನಿಮ್ಮೊಂದಿಗೆ ಕಡ್ಡಾಯವಾಗಿ ಲ್ಯಾಪ್‌ಟಾಪ್ ಒಯ್ದಿರಬೇಕು. ಎಲೆಕ್ಟ್ರಾನಿಕ್ ಶೇವರ್‌ನಷ್ಟೇ ನೀಟಾಗಿ ಇದು ಶೇವ್ ಮಾಡುತ್ತೆ. 30 ನಿಮಿಷದ ವರೆಗೆ ಚಾರ್ಜ್ ನಿಲ್ಲುತ್ತೆ. ಇದರ ರೇಟು 1500 ರುಪಾಯಿ. ಪ್ರಮುಖ ಸ್ಟೋರ್‌ಗಳಲ್ಲದೆ, ಆನ್‌ಲೈನ್‌ನಲ್ಲೂ ಖರೀದಿಗೆ ಲಭ್ಯ.