ನಾಯಿಗಳ ಮೂಲ ವಿಕಸನವಾಗಿದ್ದು ನೇಪಾಳ ಮತ್ತು ಮಂಗೋಲಿಯಾದಲ್ಲಿ: ಸಂಶೋಧನೆ ೩೮ ದೇಶಗಳ ಸುಮಾರು ೫೪೯ ನಾಯಿಗಳ ಡಿ ಎನ್ ಎ ಅಧ್ಯಯನ ಮಾಡಿರುವ ಸಂಶೋಧಕರ ತಂಡ, ನಾಯಿಗಳು ಮೊದಲು ಹುಟ್ಟಿದ್ದು ಏಶಿಯಾದ ದೇಶಗಳಾದ ನೇಪಾಳ ಮತ್ತು ಮಂಗೋಲಿಯಾದಲ್ಲಿ ಲಂಡನ್: ೩೮ ದೇಶಗಳ ಸುಮಾರು ೫೪೯ ನಾಯಿಗಳ ಡಿ ಎನ್ ಎ ಅಧ್ಯಯನ ಮಾಡಿರುವ ಸಂಶೋಧಕರ ತಂಡ, ನಾಯಿಗಳು ಮೊದಲು ಹುಟ್ಟಿದ್ದು ಏಶಿಯಾದ ದೇಶಗಳಾದ ನೇಪಾಳ ಮತ್ತು ಮಂಗೋಲಿಯಾದಲ್ಲಿ ಎಂದು ತಿಳಿಸಿದೆ ಎಂದು ಮಾಧ್ಯಮವೊಂದು ಮಂಗಳವಾರ ವರದಿ ಮಾಡಿದೆ. ಈ ಹಿಂದಿನ ಅಧ್ಯಯನಗಳ ಪ್ರಕಾರ ಮಾನವನ ನೆಚ್ಚಿನ ಗೆಳೆಯನಾದ ನಾಯಿ ಮೊದಲು ವಿಕಸಗೊಂಡಿದ್ದು ಚೈನಾ, ಮಧ್ಯ ಪ್ರಾಚ್ಯ ದೇಶಗಳು, ಸೈಬೀರಿಯಾ ಮತ್ತು ಯೂರೋಪ್ ನಲ್ಲಿ ೧೫೦೦೦ ವರ್ಷಗಳ ಹಿಂದೆ ಎಂದು ತಿಳಿಯಲಾಗಿತ್ತು. ನ್ಯೂಯಾರ್ಕ್ ನ ಕಾರ್ನೆಲ್ ವಿಶ್ವವಿದ್ಯಾಲಯದ ಆಡಮ್ ಬೋಯ್ಕೋ ಅವರ ಮುಂದಾಳತ್ವದಲ್ಲಿ ನಡೆದಿರುವ ಈ ಸಂಶೋಧನೆ "ಪ್ರೊಸೀಡಿಂಗ್ಸ್ ಆಫ್ ದ ನ್ಯಾಷನಲ್ ಅಕಾಡೆಮಿ ಆಫ್ ಸೈನ್ಸಸ್" ಎಂಬ ಜರ್ನಲ್ ನಲ್ಲಿ ಪ್ರಕಟವಾಗಿದೆ. ಆಫ್ರಿಕಾ, ಅಮೇರಿಕಾ, ಏಶಿಯಾ, ಭಾರತ, ಮಧ್ಯ ಪ್ರಾಚ್ಯ ದೇಶಗಳು, ಆಸ್ಟ್ರೇಲಿಯಾ ಮತ್ತು ಉತ್ತರದ ದ್ವೀಪಗಳನ್ನು ಒಳಗೋಂದಂತೆ ೩೮ ರಾಷ್ಟ್ರಗಳ ೫೪೯ ನಾಯಿಗಳ ಡಿ ಏನ್ ಎ ಯನ್ನು ಈ ತಂಡ ಸಂಶೋಧನೆಗೆ ಬಳಸಿಕೊಂಡಿದೆ. ಈ ಪ್ರಾಣಿಗಳು ಹಿಂದೆ ಸಾಕು ಪ್ರಾಣಿಗಳಾಗಿರಲ್ಲಿ ಬದಲಿಗೆ ಬೀದಿಗಳಲ್ಲಿ ತಿರುಗಾಡುತ್ತಿದ್ದವು ಎಂದು ಅಧ್ಯಯನ ತಿಳಿಸಿದೆ. ಆದರೆ ಮೊದಲ ಬಾರಿಗೆ ನಾಯಿಗಳು ವಿಕಸನಗೊಂಡ ಸಮಯವನ್ನು ಈ ಸಂಶೋಧನೆ ತಿಳಿಸಿಲ್ಲ.