ರೂಮರ್ ರಾಜ ಐಫೋನ್ -6 ವರ್ಷಾಂತ್ಯದೊಳಗೆ ಮಾರುಕಟ್ಟೆಗೆ ಬರಲಿರುವ ಐಫೋನ್-6ಬಗ್ಗೆ ಸಾಕಷ್ಟು ರೂಮರ್‌ಗಳು ಹರಿದಾಡುತ್ತಿವೆ. .. ವರ್ಷಾಂತ್ಯದೊಳಗೆ ಮಾರುಕಟ್ಟೆಗೆ ಬರಲಿರುವ ಐಫೋನ್-6ಬಗ್ಗೆ ಸಾಕಷ್ಟು ರೂಮರ್‌ಗಳು ಹರಿದಾಡುತ್ತಿವೆ. ಮೊಬೈಲ್‌ನ ವಿನ್ಯಾಸದ ಬಗ್ಗೆ ಅಂತೆ ಕಂತೆಗಳು ಕೇಳಿಬರುತ್ತಿವೆ. ಸಂಸ್ಥೆಯಿಂದ ಇವತ್ತಿನವರೆಗೆ ಯಾವುದೇ ಅಧಿಕೃತ ಮಾಹಿತಿ ಹೊರಬಂದಿಲ್ಲ. ಆದರೆ, ಕೆಲ ವಿನ್ಯಾಸ ಮಾದರಿ ಹಾಗೂ ಸ್ಪೆಸಿಫಿಕೇಷನ್‌ಗಳು ಆಸಕ್ತಿದಾಯಕವಾಗಿವೆ. ಐಫೋನ್ ಇಂದು ಮಾರುಕಟ್ಟೆಯಲ್ಲಿ ಪರಿಚಿತವಾಗಿರುವುದ ಎಡ್ಜ್‌ಗಳು ಬದಲಾಗುವ ಸಾಧ್ಯತೆಯಿದೆ. ಕರ್ವಡ್ ಎಡ್ಜ್‌ಗಳ ಜತೆಗೆ ಮೆಟಲ್ ಬಾಡಿಯಲ್ಲಿ ಮೊಬೈಲ್ ಕಾಣಿಸಿಕೊಳ್ಳಲಿದೆ ಎಂದು ಜಪಾನ್‌ನ ನಿಯತಕಾಲಿಕೆ ವರದಿ ಮಾಡಿದೆ. ಸ್ಕ್ರೀನ್ ಗಾತ್ರ ಕೂಡ ಹೆಚ್ಚಾಗಲಿದ್ದು ಸ್ಟ್ಯಾಂಡರ್ಡ್ ಸ್ಮಾರ್ಟ್‌ಫೋನ್‌ನತ್ತ ವಾಲುವ ಸಾಧ್ಯತೆಯಿದೆ. ಸದ್ಯದ ವರದಿ ಪ್ರಕಾರ, ಇದು 4.7 ಇಂಚು ಗಾತ್ರ ಹೊಂದಲಿದ್ದು, ಸ್ಕ್ರೀನ್ ಮತ್ತು ಎಡ್ಜ್‌ಗಳ ನಡುವಿನ ಅಂತರ ಕಡಿಮೆಯಾಗಲಿದೆ. ಆ್ಯಪಲ್‌ನ ಒಂದು ವೈಶಿಷ್ಟ್ಯತೆಯೆಂದರೆ ಉತ್ಪನ್ನಗಳು ಮಾರುಕಟ್ಟೆಗೆ ಬರುವವರೆಗೂ ಒಂದಿಷ್ಟು ಸುದ್ದಿ ಹೊರಬರದ ಹಾಗೆ ಮಾಡುತ್ತದೆ. ಇದೇ ಕಾರಣದಿಂದ ಜನರಲ್ಲಿಯೂ ಇದರ ಬಗ್ಗೆ ಕುತೂಹಲ ಹೆಚ್ಚಾಗುತ್ತದೆ.