2017ರಲ್ಲಿ 13.4 ಕೋಟಿ 'ಆನ್‌ಲೈನ್‌' ಮಕ್ಕಳು! ಭಾರತದಲ್ಲಿಯೂ ಇಂಟರ್ನೆಟ್ ಬಿಸಿ ಏರುತ್ತಿದೆ. ಸಮೀಕ್ಷೆಯೊಂದರ ಪ್ರಕಾರ 2017ರ ಅಂತ್ಯಕ್ಕೆ ಭಾರತದ ಸುಮಾರು 13.4 ಕೋಟಿ ಮಕ್ಕಳು ಅಂತರ್ಜಾಲ ಬಳಸುವಂತಾಗುತ್ತಾರೆ. ಇದರಿಂದ ಮುಂದಿನ 4 ವರ್ಷಗಳಲ್ಲಿ ದೇಶದಲ್ಲಿನ ಅಂತರ್ಜಾಲ ಬಳಸುವ ಮಕ್ಕಳ ಸಂಖ್ಯೆ ಮೂರು ಪಟ್ಟು ಹೆಚ್ಚಾಗಲಿದೆ. ಅಂದರೆ ಇನ್ನು ಜನಿಸುವ ಹೆಚ್ಚಿನ ಮಕ್ಕಳು ಅಂತರ್ಜಾಲ ಸಂಪರ್ಕ ಪಡೆಯುವ ಸಾಧ್ಯತೆ ಹೆಚ್ಚಿದೆ. ಇವರಲ್ಲಿ ಬಹುತೇಕರು ಸ್ಮಾರ್ಟ್‌ಫೋನ್‌ಗಳ ಮೂಲಕವೇ ಅಂತರ್ಜಾಲ ಜಗತ್ತು ಪ್ರವೇಶಿಸಲಿದ್ದಾರೆ ಎಂದು ಯೂರೋಪ್ ಮೂಲದ ಟೆಲಿಕಾಂ ಸಂಸ್ಥೆ ಮಾಡಿರುವ ಸಮೀಕ್ಷೆ ಹೇಳಿದೆ. ಆದರೆ ಇದೇ ಸಂದರ್ಭದಲ್ಲಿ ಮತ್ತೊಂದು ಎಚ್ಚರಿಕೆ ಸಂದೇಶವನ್ನು ನೀಡಿದ್ದು, ಭಾರತ ಸರ್ಕಾರವು ಅಂತರ್ಜಾಲದಲ್ಲಿನ ಆಪತ್ತುಗಳಿಗೆ ಪರಿಹಾರ ಕಂಡುಕೊಳ್ಳಬೇಕು ಎಂದು ಹೇಳಿದೆ.