ಭಾರತಕ್ಕೆ ಲಗ್ಗೆ ಇಡಲಿದೆ ವಿಶ್ವದ ಪ್ರಥಮ 4 ಜಿಬಿ ಸಾಮಥ್ಯದ 'ಏಸಸ್ ಝೆನ್ ಫೋನ್' ಭಾರತದಲ್ಲಿಗ ಸ್ಮಾರ್ಟ್ ಫೋನ್ ಗಳದ್ದೇ ಆರ್ಭಟ. ವಿಶೇಷ ಫಿಚರ್ಸ್ ಗಳನ್ನು ನೀಡುವ ಮೂಲಕ ಭಾರತೀಯ ಮಾರುಕಟ್ಟೆಯಲ್ಲಿ... ನವದೆಹಲಿ: ಭಾರತದಲ್ಲಿಗ ಸ್ಮಾರ್ಟ್ ಫೋನ್ ಗಳದ್ದೇ ಆರ್ಭಟ. ವಿಶೇಷ ಫಿಚರ್ಸ್ ಗಳನ್ನು ನೀಡುವ ಮೂಲಕ ಭಾರತೀಯ ಮಾರುಕಟ್ಟೆಯಲ್ಲಿ ಪಾರಮ್ಯ ಸಾಧಿಸಲು ಮೊಬೈಲ್ ಕಂಪನಿಗಳು ಹವಣಿಸುತ್ತಿವೆ. ಈ ಮಧ್ಯೆ ಐಫೋನ್ ಗೆ ಪೈಪೋಟಿ ನೀಡಲು ತೈವಾನ್ ದೇಶದ 2 ಸ್ಮಾರ್ಟ್ ಫೋನು ಭಾರತೀಯ ಮಾರುಕಟ್ಟೆಗೆ ಏಪ್ರಿಲ್ 23 ರಂದು ಲಗ್ಗೆಯಿಡುತ್ತಿದೆ. ವಿಶೇಷವೆಂದರೆ ಈ ಫೋನ್ ನಲ್ಲಿ 4ಜಿಬಿ ಮೆಮೋರಿ ಹೊಂದಿದ್ದು, ವಿಶ್ವದ ಮೊಟ್ಟ ಮೊದಲ ಸ್ಮಾರ್ಟ್ ಫೋನ್ ಇದಾಗಿಲಿದೆ. ಈ ಮಾಡೆಲ್, ಮೂರು ಅವತರಣಿಕೆಯಲ್ಲಿ ಬಿಡುಗಡೆಯಾಗಲಿದೆ. ವಿಶ್ವದ ಮೊದಲ 4ಜಿಬಿ ರ್ಯಾಮ್ ಫೋನ್ ಎಂದಷ್ಟೇ ಅಲ್ಲ, ಇದು ವಿಶ್ವದ ಅತ್ಯುತ್ತಮ ಬ್ಯಾಕ್ ಲೈಟ್ ಮೋಡ್ ಹೊಂದಿರುವ ಫೋನ್ ಎಂದೂ ಹೆಗ್ಗಳಿಕೆ ಹೊಂದಿದೆ. 3,000 ಸಾಮರ್ಥ್ಯ ಹೊಂದಿರುವ ಈ ಫೋನ್'ನ ಬ್ಯಾಟರಿಯನ್ನ ತುಂಬಾ ಬೇಗ ಚಾರ್ಜ್ ಮಾಡಬಹುದಂತೆ. 5.5 ಇಂಚು ಹೆಚ್'ಡಿ ಪರದೆ ಹೊಂದಿರುವ ಈ ಸ್ಮಾರ್ಟ್'ಫೋನ್'ನಲ್ಲಿ 13 ಮೆಗಾಪಿಕ್ಸೆಲ್ ಕ್ಯಾಮೆರಾ ಸೌಲಭ್ಯವಿದೆ. ಏಪ್ರಿಲ್ 23ರಂದು ಬಿಡುಗಡೆಯಾಗಲಿರುವ ಏಸಸ್ ಝೆನ್'ಫೋನ್ 2 ಸ್ಮಾರ್ಟ್ ಫೋನ್ ನ ಬೆಲೆಯನ್ನು ಸಂಸ್ಥೆ ಇನ್ನೂ ಬಹಿರಂಗಪಡಿಸಿಲ್ಲ.