ಪಗಡೆ ಪುರಾಣ ವಿಜ್ಞಾನದಿಂದ ಅದೃಷ್ಟ ಪರೀಕ್ಷೆ ಸಾಧ್ಯವೇ? ಬಲು ಕಷ್ಟ ಎನ್ನುವುದು ಭೌತಶಾಸ್ತ್ರಜ್ಞರ ಉತ್ತರ. ಅವರು ಇದಕ್ಕೆ ಉದಾಹರಣೆ ಕೊಡೋದು ಪಗಡೆ ದಾಳವನ್ನ. ಎಷ್ಟೋ ಮಂದಿ ಈ ಪಗಡೆ ಕಾಯಿಯಲ್ಲೇ ಅದೃಷ್ಟ ಪರೀಕ್ಷೆ ಮಾಡಿಸಿಕೊಂಡಿದ್ದಾರೆ ಬಿಡಿ. ಆದರೆ ಇದರಲ್ಲಿ ವಿಜ್ಞಾನಕ್ಕೂ, ಅದೃಷ್ಟಕ್ಕೂ ಸಂಬಂಧ ಇದೆಯೇ ಎಂಬ ಪ್ರಶ್ನೆ ಉದ್ಭವವಾಗುತ್ತದೆ. ಆದರೆ ಭೌತಶಾಸ್ತ್ರಜ್ಞರು ಹೇಳೋದು, ಇಲ್ಲಿ ವಿಜ್ಞಾನದ ಕೆಲಸ ಏನಿಲ್ಲ ಎಂಬುದು. ಆದರೆ ನೀವು ಕಾಯಿಯನ್ನು ಹೇಗೆ ಉರುಳಿಸಿದ್ದೀರಿ ಎಂಬುದರ ಮೇಲೆ ನಮಗೆ ಬೇಕಾದ ಅಂಕೆಗಳ ಮೇಲ್ಮೈ ಬಂದರೂ ಬರಬಹುದು ಎನ್ನುತ್ತಾರೆ. ಇಲ್ಲಿ ಒತ್ತಡ(ಫೋರ್ಸ್) ಕೆಲಸ ಮಾಡಬಹುದು ಎಂದೂ ಹೇಳುತ್ತಾರೆ. ಒಂದು ವೇಳೆ 6 ಬಿದ್ದರೆ ಅದೃಷ್ಟವೆಂದೂ, 1 ಬಿದ್ದರೆ ದುರದೃಷ್ಟವೆಂದೂ ಕರೆದು ಸುಮ್ಮನಾಗಬಹುದು ಅಷ್ಟೇ ಎನ್ನುತ್ತಾರೆ.