ಮೊಟೋ ಎಕ್ಸ್ ಸ್ಮಾರ್ಟ್‌ಫೋನ್ ದರ ಕಡಿತ ಮೋಟೊರಲಾ ಇಂಡಿಯಾ ಎರಡನೇ ತಲೆಮಾರಿನ ಮೋಟೋ ಎಕ್ಸ್ ಬೆಲೆಯನ್ನು... ನವದೆಹಲಿ: ಮೋಟೊರಲಾ ಇಂಡಿಯಾ ಎರಡನೇ ತಲೆಮಾರಿನ ಮೋಟೋ ಎಕ್ಸ್ ಬೆಲೆಯನ್ನು ಕಡಿತಗೊಳಿಸಿದೆ. ಎರಡನೇ ತಲೆಮಾರಿನ ಮೋಟೊ ಎಕ್ಸ್ ಸ್ಮಾರ್ಟ್‌ಫೋನ್ ಬೆಲೆ ಕಡಿತವನ್ನು ಮೋಟೊರಲಾ ಇಂಡಿಯಾ ಘೋಷಿಸಿದ್ದು, ಎಕ್ಸ್‌ಚೇಂಜ್ ಆಫರ್ ಕೂಡ ನೀಡಿದೆ. ಎರಡನೇ ತಲೆಮಾರಿನ ಬೇಸ್ 16 ಜಿಬಿ ಆವೃತ್ತಿ ಮೋಟೊ ಎಕ್ಸ್ ಬಿಡುಗಡೆ ದರವಾದ 31,999ಕ್ಕಿಂತ ಕಡಿಮೆಯಾಗಿದ್ದು, ಪ್ರಸ್ತುತ ಬೆಲೆ 29,999 ರು.ಆಗಿದೆ. ಅಲ್ಲದೇ ಇದಕ್ಕೆ ಎಕ್ಸ್‌ಚೇಂಜ್ ಆಫರ್ ಕೂಡ ನೀಡಲಾಗಿದೆ. ಇದರನ್ವಯ ಮೋಟೊ ಎಕ್ಸ್ ಅನ್ನು ಸ್ಟಾಂಡರ್ಡ್ ಮಾದರಿಗೆ 25.999 ಮತ್ತು ಮರ ಮತ್ತು ಚರ್ಮದ ಆವೃತ್ತಿಗಳಿಗೆ 25.999ರು ಗಳಿವೆ. ಮೋಟೊರಲಾ 32ಜಿಬಿ ಆವೃತ್ತಿಯನ್ನು ಬಿಡುಗಡೆ ಮಾಡುವ ದಿನವೇ ಈ ಆಫರ್‌ನ್ನು ಮೋಟೊರಲಾ ಇಂಡಿಯಾ ಪ್ರಕಟಿಸಿದೆ. ಮೋಟೊ ಎಕ್ಸ್ 5.2 ಇಂಚ್, ಪೂರ್ಣ ಎಚ್‌ಡಿ. ಅಮೋಲೆಡ್ ಡಿಸ್ಪೈಯನ್ನು ಹೊಂದಿದ್ದು, ವಕ್ರವಾದ ಲೋಹದ ಫ್ರೇಮ್ ಹೊಂದಿದೆ. 2.5 ಜಿಎಚ್‌ಜಡ್ ಕ್ವಾಲ್‌ಕಾಂ ಸ್ನಾಪ್‌ಡ್ರಾಗನ್ 801 ಕ್ಯಾಟ್ ಕೋರ್ ಪ್ರೋಸೆಸರ್ ಮತ್ತು 2 ಜಿಬಿ ರಾಮ್ ಹೊಂದಿರುವ ಇದು 9.9 ಮಿಮಿ ದಪ್ಪನಾಗಿದ್ದು 144 ಗ್ರಾಂ ತೂಕವಿದೆ.