ಆ್ಯಂಗ್ರಿಬರ್ಡ್ಸ್ ಗೋ ಆ್ಯಂಡ್ರಾಯ್ಡ್, ಗೂಗಲ್ ಕ್ರೋಮ್ ಬಳಕೆದಾರರ ಹುಚ್ಚು ಹಿಡಿಸಿದ ಆ್ಯಂಗ್ರಿ ಬರ್ಡ್ಸ್ ಹೊಸ ರೂಪದಲ್ಲಿ ಬರುತ್ತಿದೆಯಂತೆ. ವರ್ಷಾಂತ್ಯದೊಳಗೆ 'ಆ್ಯಂಗ್ರಿಬರ್ಡ್ಸ್ ಗೋ' ಬರುತ್ತಿದೆ. ಮೂಲಗಳ ಪ್ರಕಾರ ಇದು ರೇಸ್‌ಗೇಮ್ ಆಗಿರುವ ಸಾಧ್ಯತೆಯಿದೆ. ಈ ಹಿಂದಿನ ಬರ್ಡ್‌ಗಳಿಗಿಂತ ವಿಚಿತ್ರ ಹಾಗೂ ವಿಶೇಷವಾಗಿರುತ್ತದೆ ಎಂದು ರೋವಿಯೋ ಕಂಪನಿಯೇ ಹೇಳಿಕೊಂಡಿದೆ. ಆ್ಯಂಗ್ರಿಬರ್ಡ್ಸ್ ಬ್ರಾಂಡ್‌ನ 6ನೇ ಗೇಮ್ ಇದಾಗಿರಲಿದೆ. ಈಗಾಗಲೇ ಆ್ಯಂಗ್ರಿಬರ್ಡ್ಸ್, ಆ್ಯಂಗ್ರಿಬರ್ಡ್ಸ್ ಸೀಸನ್, ಸ್ಪೇಸ್, ವಾರ್ ಮತ್ತು ಫ್ರೆಂಡ್ಸ್ ಮಾದರಿಗಳು ಹೊರಬಂದಿವೆ. ಆದರೆ ಆ್ಯಂಗ್ರಿಬರ್ಡ್ಸ್ ಗೋ ಗೇಮು ಫೇಸ್‌ಬುಕ್ ಹಾಗೂ ಇತರ ಸಾಮಾಜಿಕ ತಾಣಗಳ ಬಳಕೆದಾರರನ್ನು ಗಮನದಲ್ಲಿಟ್ಟುಕೊಂಡು ರೂಪಿಸಲಾಗುತ್ತಿದೆ. ಮೊಬೈಲ್ ಬಳಕೆದಾರರಿಗೆ ಪೂರ್ಣ ಪ್ರಮಾಣದ ಗೇಮ್ಸ್ ಸಿಗುವ ಸಾಧ್ಯತೆ ಕಡಿಮೆ ಎನ್ನಲಾಗುತ್ತಿದೆ.