ಆ್ಯಪ್ ಕದನ ಆ್ಯಪಲ್ ಮತ್ತು ಆ್ಯಂಡ್ರಾಯ್ಡ್ ಮೊಬೈಲ್‌ಗಳ ಕದನ ಕಳೆದ ಮೂರು ವರ್ಷಗಳಿಂದ ತಾರಕಕ್ಕೇರುತ್ತಿದೆ. ಆ್ಯಂಡ್ರಾಯ್ಡ್ ಮೊಬೈಲ್‌ಗಳ ಪಾಲು ಜಾಗತಿಕ ಮಾರುಕಟ್ಟೆಯಲ್ಲಿ ಶೇ.70ಕ್ಕೂ ಅಧಿಕವಿದೆ. ಆದಾಗ್ಯೂ ಅಪ್ಲಿಕೇಷನ್ ಮಾರುಕಟ್ಟೆಯಲ್ಲಿ ಆ್ಯಪಲ್‌ನ ಆ್ಯಪ್ ಸ್ಟೋರ್ ಸಾಕಷ್ಟು ಮುಂದಿದೆ. ಮಾರುಕಟ್ಟೆಯ ಎರಡನೇ ಮೂರರಷ್ಟು ಭಾಗವನ್ನು ಆ್ಯಪಲ್ ಆವರಿಸಿದೆ. ಅಪ್ಲಿಕೇಷನ್ ಡೌನ್‌ಲೋಡ್ ಪ್ರಮಾಣದಲ್ಲಿ ಗೂಗಲ್ ಪ್ಲೇ ಮುಂದಿದೆ. ಆದಾಗ್ಯೂ ಆದಾಯದಲ್ಲಿ ಹಿಂದೆ ಬೀಳಲು ಪ್ರಮುಖ ಕಾರಣವೆಂದರೆ, ಒಂದು ಆ್ಯಪಲ್ ಫೋನ್‌ಗಳು ಶ್ರೀಮಂತರ ಕೈನಲ್ಲಿರುವುದು. ಹಾಗೆಯೇ ಅವರು ದುಡ್ಡು ನೀಡಿ ಅಪ್ಲಿಕೇಶನ್ ಖರೀದಿಸಲು ಹಿಂದೆ ಮುಂದೆ ನೋಡುವುದಿಲ್ಲ. ಆದರೆ ಆ್ಯಂಡ್ರಾಯ್ಡ್ ಮಧ್ಯಮ ಹಾಗೂ ಸಾಮಾನ್ಯರ ಕೈನಲ್ಲಿ ಹೆಚ್ಚು ಓಡಾಡುತ್ತಿದೆ. ಮತ್ತೊಂದೆಡೆ ಆ್ಯಪಲ್‌ನಲ್ಲಿ ಉಚಿತ ಅಪ್ಲಿಕೇಷನ್‌ಗಳ ಸಂಖ್ಯೆ ಕಡಿಮೆಯಿದೆ. = ಅಪ್ಲಿಕೇಷನ್ ಮಾರುಕಟ್ಟೆಯಲ್ಲಿ ಇಂದಿಗೂ ಶೇ.63ರ ಪಾಲನ್ನು ಆ್ಯಪ್ ಸ್ಟೋರ್ ಹೊಂದಿದೆ, ಉಳಿದ ಶೇ.37ರ ಭಾಗವನ್ನು ಗೂಗಲ್ ಪ್ಲೇ ಹೊಂದಿದೆ. = ಅಪ್ಲಿಕೇಷನ್ ಖರೀದಿಯಲ್ಲಿ ಅಮೆರಿಕ ಮೊದಲ ಸ್ಥಾನ ಹೊಂದಿದ್ದರೆ, ಜಪಾನ್, ದಕ್ಷಿಣ ಕೊರಿಯಾ, ಇಂಗ್ಲೆಂಡ್, ಚೀನಾ, ಆಸ್ಟ್ರೇಲಿಯಾ, ಜರ್ಮನಿ, ಕೆನಡಾ, ಫ್ರಾನ್ಸ್ ಮತ್ತು ರಷ್ಯಾ ದೇಶಗಳು ನಂತರದ ಸ್ಥಾನ ಹೊಂದಿವೆ. = 2013ನೇ ಸಾಲಿನಲ್ಲಿ ದಕ್ಷಿಣ ಕೊರಿಯಾ, ಜಪಾನ್ ಹಾಗೂ ಚೀನಾಗಳಲ್ಲಿ ದೊಡ್ಡ ಪ್ರಮಾಣದ ಬೆಳವಣಿಗೆಯಾಗಿದೆ. = 2013ರಲ್ಲಿ ಹೆಚ್ಚಿನವರು ಉಚಿತ ಆಪ್ಲಿಕೇಷನ್ ಬಗ್ಗೆ ಮಾತ್ರ ಆಸಕ್ತಿ ತೋರಿದ್ದಾರೆ. = ಪ್ರಖ್ಯಾತ ಅಪ್ಲಿಕೇಷನ್‌ಗಳು ಮಾರುಕಟ್ಟೆಗೆ ಬಂದ ಎರಡೇ ದಿನದಲ್ಲಿ 10 ಲಕ್ಷಕ್ಕೂ ಅಧಿಕ ಡೌನ್‌ಲೋಡ್ ಆಗಿವೆ. = ಆ್ಯಪ್ ಸ್ಟೋರ್‌ನಲ್ಲಿರುವ ಸೂಪರ್‌ಸೆಲ್ಸ್ ಕ್ಲ್ಯಾಶ್ ಆಫ್ ಕ್ಲ್ಯಾನ್ಸ್ 2013ರಲ್ಲಿ ಅತಿ ಹೆಚ್ಚು ಆದಾಯ ಗಳಿಸಿದ ಅಫ್ಲಿಕೇಷನ್. = 2013ರಲ್ಲಿ ಬಿಡುಗಡೆಯಾದ ಯಾವುದೇ ಅಪ್ಲಿಕೇಷನ್ ಆ್ಯಪ್ ಸ್ಟೋರ್‌ನಲ್ಲಿ ಮೊದಲ 10ರ ಪಟ್ಟಿಯಲ್ಲಿ ಬರಲಿಲ್ಲ. ಆದರೆ ಗೂಗಲ್ ಪ್ಲೇನಲ್ಲಿ ಟಾಪ್-10ರ ಪಟ್ಟಿಯಲ್ಲಿ 4 ಹೊಸ ಅಪ್ಲಿಕೇಷನ್‌ಗಳು ಸೇರಿವೆ. = ಆ್ಯಪ್ ಸ್ಟೋರ್‌ನ ಟಾಪ್-10 ಅಪ್ಲಿಕೇಷನ್‌ಗಳಲ್ಲಿ ಸ್ಥಾನ ಪಡೆದ ಏಕೈಕ ಪೇಡ್ ಅಪ್ಲಿಕೇಷನ್ ಎಂದರೆ ಮೈನ್‌ಕ್ರಾಫ್ಟ್. = ಟಾಪ್-3 ಪಟ್ಟಿಯನ್ನು ಗೇಮ್ ಅಪ್ಲಿಕೇಷನ್‌ಗಳೇ ಆಕ್ರಮಿಸಿಕೊಂಡಿವೆ. = ಡಿಸ್ನಿ, ಫೇಸ್‌ಬುಕ್, ಗೂಗಲ್, ವಾಟ್ಸ್ ಆ್ಯಪ್ ಹಾಗೂ ಗೇಮ್‌ಲಾಫ್ಟ್‌ಗಳು ಖ್ಯಾತ ಪಬ್ಲಿಷರ್ಸ್ ಎಂಬ ಖ್ಯಾತಿ ಗಳಿಸಿವೆ. = ಸೂಪರ್‌ಸೆಲ್, ಕಿಂಗ್.ಕಾಮ್, ಲೈನ್ ಕಾರ್ಪೊರೇಷನ್ ಅತಿ ಹೆಚ್ಚು ಆದಾಯಗೊಳಿಸುವ ಪಬ್ಲಿಷರ್ಸ್. = ಏಷ್ಯಾ ಮಾರುಕಟ್ಟೆ ವರ್ಷದಿಂದ ವರ್ಷಕ್ಕೆ ಅನಿರೀಕ್ಷಿತ ಪ್ರಮಾಣದಲ್ಲಿ ಬೆಳೆಯುತ್ತಿದೆ. = ಅಮೆಝಾನ್ ಆ್ಯಪ್ ಸ್ಟೋರ್ ಖ್ಯಾತಿಯೂ ಅಮೆರಿಕ ಹಾಗೂ ಯುರೋಪಿಯನ್ ದೇಶಗಳಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಎರಡನೇ ಮೂರರಷ್ಟು ಮಾರುಕಟ್ಟೆ ಆ್ಯಪಲ್ ತೆಕ್ಕೆಗೆ ಗೂಗಲ್ ಪ್ಲೇನಲ್ಲಿ ಉಚಿತವಾಗಿ ದೊರೆಯುವ ಸಾಕಷ್ಟು ಅಫ್ಲಿಕೇಷನ್‌ಗಳಿಗೆ ಆ್ಯಪ್ ಸ್ಟೋರ್‌ನಲ್ಲಿ ಹಣ ತೆರಬೇಕಿದೆ. ಇದರ ಪರಿಣಾಮವಾಗಿ ಆ್ಯಪ್ ಮಾರುಕಟ್ಟೆಯ ಶೇ.63ರ ಭಾಗವನ್ನು ಆ್ಯಪ್ ಸ್ಟೋರ್ ಹೊಂದಿದೆ. ಆ್ಯಪ್ ಸ್ಟೋರ್ ಮಾರುಕಟ್ಟೆಯು ಶೇ.12ರಷ್ಟು ವೃದ್ಧಿಯಾಗಿದ್ದರೆ, ಗೂಗಲ್ ಪ್ಲೇಗೆ ಶೇ.51ರಷ್ಟು ಹೆಚ್ಚಿನ ಆದಾಯ ಬಂದಿದೆ. ಒಟ್ಟಾರೆ ವಾರ್ಷಿಕ ಆದಾಯವು ಶೇ.24ರಷ್ಟು ಹೆಚ್ಚಾಗಿದೆ. ಆ್ಯಪ್ ಸ್ಟೋರ್ ಜಾಗಕ್ಕೆ ಗೂಗಲ್ ಪ್ಲೇ ಲಗ್ಗೆ ಹಾಕುತ್ತಿದೆ ಎನ್ನುವುದಕ್ಕೆ ಸ್ಪಷ್ಟ ಸಂದೇಶವೆಂದರೆ 2013 ಕೊನೆಯ 4 ತಿಂಗಳಲ್ಲಿ ಶೇ.7ರಷ್ಟು ತನ್ನ ಮಾರುಕಟ್ಟೆಯನ್ನು ವೃದ್ಧಿಸಿಕೊಂಡಿದೆ. ಟಾಪ್ 200 ಅಪ್ಲಿಕೇಷನ್‌ಗಳಿಂದ ಆ್ಯಪ್ ಸ್ಟೋರ್ 18 ಮಿಲಿಯನ್ ಡಾಲರ್ ಹಾಗೂ ಗೂಗಲ್ ಪ್ಲೇ ಸುಮಾರು 12 ಮಿಲಿಯನ್ ಡಾಲರ್ ಆದಾಯಗಳಿಸಿದೆ. ದಕ್ಷಿಣ ಕೊರಿಯಾದಲ್ಲಿ ಶೇ.759ರ ಬೆಳವಣಿಗೆ ಈ ವರ್ಷದ ಅಪ್ಲಿಕೇಷನ್ ಮಾರುಕಟ್ಟೆ ಪರಿಣಿತರನ್ನು ದಂಗು ಬಡಿಸಿದ್ದು ದಕ್ಷಿಣ ಕೊರಿಯಾದಲ್ಲಿ ಇದ್ದಕ್ಕಿದ್ದಂತೆ ಶೇ.759ರಷ್ಟು ಅಧಿಕ ಆದಾಯ ಬಂದಿದ್ದು. ಚೀನಾದಲ್ಲಿ ಶೇ.280, ಜಪಾನ್‌ನಲ್ಲಿ ಶೇ.245, ರಷ್ಯಾದಲ್ಲಿ ಶೇ.125ರಷ್ಟು ಅಪ್ಲಿಕೇಷನ್ ಮಾರುಕಟ್ಟೆ ಅಭಿವೃದ್ಧಿಕಂಡಿದೆ. ಈಗಾಗಲೇ ಅಪ್ಲಿಕೇಷನ್ ಮಾರುಕಟ್ಟೆಯ ಆದಾಯದಲ್ಲಿ ಸ್ಥಿರತೆ ಸಾಧಿಸಿರುವ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್‌ನಲ್ಲಿ ಶೇ.65ರ ಆಸುಪಾಸಿನ ಬೆಳವಣಿಗೆ ಕಂಡಿದ್ದರೂ ಉತ್ತಮವಾಗಿದೆ. ಜಾಗತಿಕ ಮಾರುಕಟ್ಟೆಯನ್ನು ನೋಡಿದಾಗ ಧನಾತ್ಮಕ ಬೆಳವಣಿಗೆಯಿದೆ ಎಂದು ಡಿಸ್ಟಿಮೋ ಸಂಸ್ಥೆ ನಡೆಸಿದ ಸಮೀಕ್ಷೆ ಬಹಿರಂಗಪಡಿಸಿದೆ. ಟಾಪ್-10 ಉಚಿತ ಅಪ್ಲಿಕೇಷನ್‌ಗಳು ಆ್ಯಪ್ ಸ್ಟೋರ್ ಗೂಗಲ್ ಪ್ಲೇ ಕ್ಯಾಂಡಿಕ್ರಶ್ ಸಾಗಾ ಫೇಸ್‌ಬುಕ್ ಯೂಟ್ಯೂಬ್ ವಾಟ್ಸ್ ಆ್ಯಪ್ ಗೂಗಲ್ ಮ್ಯಾಪ್ಸ್ ಸ್ಕೈಪ್ ಟೆಂಪಲ್ ರನ್2 ಫೇಸ್‌ಬುಕ್ ಮೆಸೇಂಜರ್ ಡೆಸ್ಪಿಕೇಬಲ್ ಮಿ: ಮಿನಿಯನ್ ರಶ್ ಕ್ಯಾಂಡಿಕ್ರಶ್ ಸಾಗಾ ಫೇಸ್‌ಬುಕ್ ಇನ್ಸ್ಟಾಗ್ರಾಮ್ ಇನ್ಸ್ಟಾಗ್ರಾಮ್ ಸಬ್‌ವೇ ಸರ್ಫರ್ ಸ್ನ್ಯಾಪ್‌ಚಾಟ್ ಲೈನ್ ಸಬ್‌ವೇ ಸರ್ಫರ್ ಟೆಂಪಲ್ ರನ್2 ಫೈಂಡ್ ಮೈ ಐಫೋನ್ ಟ್ವೀಟರ್ ಟಾಪ್-10 ಖರೀದಿಸಿದ ಅಪ್ಲಿಕೇಷನ್‌ಗಳು ಆ್ಯಪ್ ಸ್ಟೋರ್ ಗೂಗಲ್ ಪ್ಲೇ ವಾಟ್ಸ್ ಆ್ಯಪ್ ಸ್ವಿಫ್ಟ್‌ಕೀ ಕಿಬೋರ್ಡ್ ಮೈನ್‌ಕ್ರಾಫ್ಟ್ ಪಾಕೆಟ್ ಆ್ಯಡಿಷನ್ ಟಿಟಾನಿಯಂ ಬ್ಯಾಕಪ್ ಪ್ರೋ ಕೀ ಪೌ ಮೈನ್‌ಕ್ರಾಫ್ಟ್ ಪಾಕೆಟ್ ಆ್ಯಡಿಷನ್ ಟೆಂಪಲ್ ರನ್ ಓಝಡ್ ಪವರ್ಯಾಂಪ್ ಫುಲ್ ವರ್ಷನ್ ಅನ್‌ಲಾಕರ್ ಪ್ಲೇಗ್ ಇಂಕ್ ನೋವಾ ಲಾಂಚರ್ ಪ್ರೈಮ್ ಆ್ಯಂಗ್ರಿ ಬರ್ಡ್ಸ್ ಸ್ಟಾರ್ ವಾರ್ಸ್ ಬ್ಯುಟಿಫುಲ್ ವಿಜೆಟ್ಸ್ ಪ್ರೋ ಹೆಡ್ಸ್ ಅಪ್ ಟನ್ಲೆನ್ ರೇಡಿಯೋ ಪ್ರೋ ಪಿಫಾ 13 ರೂಟ್ ಎಕ್ಸ್‌ಪ್ಲೋರ್ ವೇರ್ ಇಸ್ ಮೈ ವಾಟರ್ ವೇರ್ ಇಸ್ ಮೈ ವಾಟರ್ ಪೇಜಸ್ ಎಚ್‌ಡಿ ವಿಜೆಟ್ಸ್ ಬ್ಯುಸಿನೆಸ್ ಮಾಡೆಲ್ ಹೇಗಿದೆ? ಬ್ಯುಸಿನೆಸ್ ಮಾಡೆಲ್‌ನಲ್ಲಿ ಮೂರು ವಿಧಗಳಿವೆ. ಉಚಿತ ಅಪ್ಲಿಕೇಷನ್‌ನಲ್ಲಿ ಖರೀದಿ, ಅಪ್ಲಿಕೇಷನ್ ಖರೀದಿ ಹಾಗೂ ಖರೀದಿಸಿದ ಅಪ್ಲಿಕೇಷನ್‌ಲ್ಲಿ ಮತ್ತಷ್ಟು ಫೀಚರ್ಸ್‌ಗಳನ್ನು ಖರೀದಿಸುವುದು. ಉಚಿತವಾಗಿ ಡೌನಲೋಡ್ ಮಾಡಿದ ಬಹುತೇಕ ಅಪ್ಲಿಕೇಷನ್‌ಗಳು ಪರಿಪೂರ್ಣವಾಗಿರುವುದಿಲ್ಲ. ಉದಾಹರಣೆಗೆ ಟೆಂಪಲ್ ರನ್ ಡೌನ್‌ಲೋಡ್ ಮಾಡಿದ್ದರೆ ಅಲ್ಲಿ ಓಡಲು ಉಸೈನ್ ಬೋಲ್ಟ್ ಬೇಕೆಂದರೆ ಹಣ ಕೊಟ್ಟು ಖರೀದಿಸಬೇಕಾಗುತ್ತದೆ. ಇಂತಹ ಬ್ಯುಸಿನೆಸ್ ಮಾದರಿಯಿಂದ ಆ್ಯಪ್ ಸ್ಟೋರ್‌ಗೆ ಶೇ.92ರಷ್ಟು ಆದಾಯ ಬರುತ್ತದೆ. ಕಳೆದ ವರ್ಷ ಇದು ಶೇ.77ರಷ್ಟಾಗಿತ್ತು. ಉಳಿದೆರಡು ಮಾದರಿಗಳಿಂದ ಕೇವಲ ತಲಾ ಶೇ.4ರಷ್ಟು ಮಾತ್ರ ಆದಾಯ ಬರುತ್ತಿದೆ. ಅದೇ ಗೂಗಲ್ ಪ್ಲೇನಲ್ಲಿ ಇದು ಕ್ರಮವಾಗಿ ಶೇ.98 ಮತ್ತು ತಲಾ ಶೇ.1ರಷ್ಟಿದೆ. ಗೇಮ್ಸ್, ಸಾಮಾಜಿಕ ತಾಣ ಹಾಗೂ ನ್ಯೂಸ್‌ಸ್ಟ್ಯಾಂಡ್‌ನಿಂದ ಇಂತಹ ಖರೀದಿಗಳು ಹೆಚ್ಚಿನ ಪ್ರಮಾಣದಲ್ಲಿ ಆಗುತ್ತಿವೆ. ಅತಿ ಹೆಚ್ಚು ಆದಾಯ ಗಳಿಸಿದ ಟಾಪ್-10 ಅಪ್ಲಿಕೇಷನ್ ಆ್ಯಪ್ ಸ್ಟೋರ್ ಗೂಗಲ್ ಪ್ಲೇ ಕ್ಲ್ಯಾಶ್ ಆಫ್ ಕ್ಲ್ಯಾನ್ಸ್ ಕ್ಯಾಂಡಿ ಕ್ರಶ್ ಸಾಗಾ ಕ್ಯಾಂಡಿ ಕ್ರಶ್ ಸಾಗಾ ಪಝಲ್ ಮತ್ತು ಡ್ರ್ಯಾಗನ್ ಪಝಲ್ ಮತ್ತು ಡ್ರ್ಯಾಗನ್ ಲೈನ್ ಹೇ ಡೇ ಫಾರ್ ಕಾಕೋ ದಿ ಹಾಬಿಟ್: ಕಿಂಗ್ಡಮ್ ಆಫ್ ಮಿಡಲ್ ಅರ್ಥ್ ಲೈನ್ ಪಾಪೋ ಕಿಂಗ್ಡಮ್ ಆಫ್ ಕ್ಯಾಮ್ಲೆಟ್: ಬ್ಯಾಟಲ್ ಫಾರ್ ದಿ ನಾರ್ಥ್ ಫಾರ್ ಕಾಕೋ (ಡೆವ್‌ಸಿಸ್ಟರ್ಸ್ ಕಾರ್ಪೊರೇಷನ್) ಮೈನ್‌ಕ್ರಾಫ್ಟ್ ಪಾಕೆಟ್ ಆ್ಯಡಿಷನ್ ಲೈನ್ ಪಾಕೊಪಾಂಗ್ ಮಾಡರ್ನ್ ವಾರ್ ಅನಿಪಾಂಗ್ ಫಾರ್ ಕಾಕೋ ದಿ ಸಿಂಪ್ಸನ್ಸ್: ಟ್ಯಾಪ್ಡ್ ಔಟ್ ಪ್ರೈಡ್ ಬಿಗ್ ಫಿಶ್ ಕ್ಯಾಸಿನೋ ಲೈನ್ ವಿಂಡ್ ರನ್ನರ್ ವಾಟ್ ಆ್ಯನ್ ಐಡಿಯಾ! ಸಿಮ್ ಪೋರ್ಟೇಬಲ್ ಸೌಲಭ್ಯ ಬಂದ ಬಳಿಕ ಇದರ ಲಾಭವನ್ನು ಹೆಚ್ಚು ಪಡೆದಿರುವುದು ಐಡಿಯಾ ಸೆಲ್ಯುಲಾರ್ ನೆಟ್‌ವರ್ಕ್. ಬರೋಬ್ಬರಿ 80.88 ಲಕ್ಷ ಜನ ನಾನಾ ನೆಟ್‌ವರ್ಕ್‌ಗಳಿಂದ ಐಡಿಯಾಗೆ ಪೋರ್ಟ್ ಆಗಿದ್ದಾರೆ. ಅತಿ ಹೆಚ್ಚು ಗ್ರಾಹಕರನ್ನು ಕಳೆದುಕೊಂಡ ನೆಟ್‌ವರ್ಕ್ ಎಂದರೆ ರಿಲಯನ್ಸ್. ಸರಿಸುಮಾರು 60.13 ಲಕ್ಷ ಬಳಕೆದಾರರು ರಿಲಯನ್ಸ್‌ನಿಂದ ದೂರ ಸರಿದಿದ್ದಾರೆ. ವೊಡಾಫೋನ್ ಹಾಗೂ ಏರ್‌ಟೆಲ್ ನೆಟ್‌ವರ್ಕ್‌ಗಳಿಗೆ ಕ್ರಮವಾಗಿ 67.19 ಲಕ್ಷ ಹಾಗೂ 50.16 ಲಕ್ಷ ಗ್ರಾಹಕರು ಪೋರ್ಟ್ ಆಗಿದ್ದಾರೆ. -ರಾಧೆ