ಫೂಟ್‌ಪ್ರಿಂಟ್ ಕೂಡ ಬೇರೆ ಬೇರೆ! ಅಪರಾಧಿಗಳ ಪತ್ತೆಯಲ್ಲಿ ಬೆರಳಚ್ಚು (ಫಿಂಗರ್‌ಪ್ರಿಂಟ್) ಬಹಳ ಸಹಕಾರಿ. ಎಷ್ಟೋ ಮಂದಿ ಅಪರಾಧಿಗಳು ಸಿಕ್ಕಿಕೊಂಡಿರುವುದೇ ಫಿಂಗರ್‌ಪ್ರಿಂಟ್ ... ಅಪರಾಧಿಗಳ ಪತ್ತೆಯಲ್ಲಿ ಬೆರಳಚ್ಚು (ಫಿಂಗರ್‌ಪ್ರಿಂಟ್) ಬಹಳ ಸಹಕಾರಿ. ಎಷ್ಟೋ ಮಂದಿ ಅಪರಾಧಿಗಳು ಸಿಕ್ಕಿಕೊಂಡಿರುವುದೇ ಫಿಂಗರ್‌ಪ್ರಿಂಟ್ ಸಹಾಯದಿಂದ. ಇದಕ್ಕೆ ಕಾರಣ ಜಗತ್ತಿನಲ್ಲಿರುವ ಎಲ್ಲಾ ವ್ಯಕ್ತಿಗಳ ಫಿಂಗರ್‌ಪ್ರಿಂಟ್ ಕೂಡ ಬೇರೆ ಬೇರೆಯಾಗಿರುತ್ತವೆ. ಆದರೆ ಇನ್ನೊಂದು ವಿಚಿತ್ರ ಗೊತ್ತಾ? ಫಿಂಗರ್‌ಪ್ರಿಂಟ್ ಹಾಗೆ ಫೂಟ್‌ಪ್ರಿಂಟ್ ಕೂಡ ಬೇರೆ ಬೇರೆಯಾಗಿರುತ್ತದೆ. ಪೊಲೀಸರು ಅತ್ಯಂತ ಕಡಿಮೆ ಪ್ರಕರಣಗಳಲ್ಲಿ ಫೂಟ್‌ಪ್ರಿಂಟ್ ಅನ್ನು ತೆಗೆದುಕೊಳ್ಳುತ್ತಾರೆ. 1952ರಲ್ಲಿ ಸ್ಕಾಟಿಶ್ ಬೇಕರಿ ಪ್ರಕರಣದಲ್ಲಿ ಕಳ್ಳನನ್ನು ಇದೇ ಫೂಟ್‌ಪ್ರಿಂಟ್ ಬಳಸಿ ಹಿಡಿದಿದ್ದರಂತೆ. ಫಿಂಗರ್‌ಪ್ರಿಂಟ್ ಬಗ್ಗೆ ಗೊತ್ತಾ? ಫಿಂಗರ್‌ಪ್ರಿಂಟ್ ಬೆಳವಣಿಗೆಯಾಗುವುದು ತಾಯಿಯ ಹೊಟ್ಟೆಯಲ್ಲೇ. 2 ರಿಂದ 6 ತಿಂಗಳ ಗರ್ಭಿಣಿ ಇರುವಾಗ ಮಗುವಿನಲ್ಲಿ ಫಿಂಗರ್‌ಪ್ರಿಂಟ್ ಬೆಳವಣಿಗೆಯಾಗುತ್ತದೆ. ಚರ್ಮದ ಮಧ್ಯದ ಪದರ ವೇಗವಾಗಿ ವೃದ್ಧಿಯಾಗುವುದರಿಂದ ಒಳ ಮತ್ತು ಹೊರಗಿನ ಪದರಗಳಲ್ಲಿ ಗೆರೆಗಳು ಮೂಡುತ್ತವೆ. ಇವು ನಾವು ವಸ್ತುಗಳನ್ನು ಹಿಡಿಯಲು ಸಹಕರಿಸುತ್ತವೆ. - ಮಂಜುನಾಥ್ ಎಸ್.