ಭಾರತದಿಂದ ಪ್ರಸಕ್ತ ವರ್ಷ ಮತ್ತೆರಡು ಉಪಗ್ರಹ ಉಡಾವಣೆ ಸಾಧ್ಯತೆ ಭಾರತ ಪ್ರಸಕ್ತ ವರ್ಷದಲ್ಲಿ ಮತ್ತೆರಡು ನ್ಯಾವಿಗೇಶನ್ ಉಪಗ್ರಹಗಳು ಹಾಗು ೨೦೧೬ ರಲ್ಲಿ ಇನ್ನೊಂದನ್ನು, ಮುಂದಿನ ವರ್ಷದ ಮಧ್ಯಂತರಕ್ಕೆ ಚೆನ್ನೈ: ಭಾರತ ಪ್ರಸಕ್ತ ವರ್ಷದಲ್ಲಿ ಮತ್ತೆರಡು ನ್ಯಾವಿಗೇಶನ್ ಉಪಗ್ರಹಗಳು ಹಾಗು ೨೦೧೬ ರಲ್ಲಿ ಇನ್ನೊಂದನ್ನು, ಮುಂದಿನ ವರ್ಷದ ಮಧ್ಯಂತರಕ್ಕೆ ಉಪಗ್ರಹ ನ್ಯಾವಿಗೇಶನ್ ಸೇವೆಗಳನ್ನು ನೀಡಲು ಉಡಾವಣೆ ಮಾಡುವ ಸಾಧ್ಯತೆ ಇದೆ ಎಂದು ಭಾರತೀಯ ಬಾಹ್ಯಾಕಾಶ ಸಂಸ್ಥೆಯ ಅಧಿಕಾರಿಗಳು ತಿಳಿಸಿದ್ದಾರೆ. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ), ಈ ನ್ಯಾವಿಗೇಶನ್ ಉಪಗ್ರಹಗಳ ಚಾಲನೆಯಲ್ಲಾಗುತ್ತಿರುವ ವಿಳಂಬವನ್ನು ತಳ್ಳಿಹಾಕಿದ್ದಾರೆ. ಈ ಮೂರು ಉಪಗ್ರಹಗಳು, ಮಾರ್ಚ್ ೨೮ ರಂದು ಕಕ್ಷೆಗೆ ಹಾರುತ್ತಿರುವ ಉಪಗ್ರಹವನ್ನು ಹೊರತುಪಡಿಸಿದೆ ಎಂದು ಮೂಲಗಳು ತಿಳಿಸಿವೆ. "ನಾಳೆಯ(ಮಾರ್ಚ್ ೨೮) ಉಪಗ್ರಹ ಅಲ್ಲದೆ ಈ ವರ್ಷ ಮತ್ತೆರಡು ನ್ಯಾವಿಗೇಶನ್ ಉಪಗ್ರಹಗಳನ್ನು ಖಂಡಿತ ಉಡಾವಣೆ ಮಾಡಲಿದ್ದೇವೆ. ಈ ವರ್ಷಾಂತ್ಯಕ್ಕೆ ನಮ್ಮ ೬ ಉಪಗ್ರಹಗಳು ಬಾಹ್ಯಾಕಾಶದಲ್ಲಿರುತ್ತವೆ" ಎಂದು ಹೆಸರು ಹೇಳಲಿಚ್ಚಿಸದ ಇಸ್ರೋ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.