ಭಾರತದಾದ್ಯಂತ ಗೋಚರವಾಗುವ ಏಪ್ರಿಲ್ ೪ರ ಚಂದ್ರಗ್ರಹಣ ಏಪ್ರಿಲ್ ನಾಲ್ಕರಂದು ಚಂದ್ರಗ್ರಹಣ ಸಂಭವಿಸಲಿದ್ದು, ಹವಾಮಾನದ ಪರಿಸ್ಥಿತಿಯನ್ನು ಹೊರತುಪಡಿಸಿದರೆ ಇದು ಭಾರತದಾದ್ಯಂತ ಗೋಚರವಾಗಲಿದೆ ಹೈದರಾಬಾದ್: ಏಪ್ರಿಲ್ ನಾಲ್ಕರಂದು ಚಂದ್ರಗ್ರಹಣ ಸಂಭವಿಸಲಿದ್ದು, ಹವಾಮಾನದ ಪರಿಸ್ಥಿತಿಯನ್ನು ಹೊರತುಪಡಿಸಿದರೆ ಇದು ಭಾರತದಾದ್ಯಂತ ಗೋಚರವಾಗಲಿದೆ ಎಂದು ತಜ್ಞರು ಇಂದು ತಿಳಿಸಿದ್ದಾರೆ. ಸೂರ್ಯ ಮತ್ತು ಚಂದ್ರನ ನಡುವೆ ಭೂಮಿ ಹಾದು ಹೋದಾಗ ಚಂದ್ರನ ಮೇಲೆ ನೆರಳು ಬಿದ್ದು ಚಂದ್ರಗ್ರಹಣವಾಗುತ್ತದೆ. "ಭೂಮಿ ಸಂಪೂರ್ಣವಾಗಿ ಚಂದ್ರನನ್ನು ಮರೆಮಾಚಿದರೆ ಅದು ಪೂರ್ಣ ಚಂದ್ರಗ್ರಹಣ. ಇದು ಏಪ್ರಿಲ್ ೪ ರಂದು ಸಂಭವಿಸಲಿದೆ" ಎಂದು ಬಿ ಎಂ ಬಿರ್ಲಾ ವಿಜ್ಞಾನ ಕೇಂದ್ರದ ನಿರ್ದೇಶಕ ಬಿ ಜಿ ಸಿದ್ಧಾರ್ಥ್ ಇಂದಿಲ್ಲಿ ತಿಳಿಸಿದ್ದಾರೆ. "ಚಂದ್ರಗ್ರಹಣದ ಪ್ರಾರಂಭ ಸಂಜೆ ೩:೪೭ಕ್ಕೆ ಪ್ರಾರಂಭವಾಗಲಿದೆ. ಪೂರ್ಣ ಚಂದ್ರಗ್ರಹಣ ಸಂಜೆ ೫:೩೦ ಕ್ಕೆ ಪ್ರಾಂಭವಾಗಲಿದ್ದು, ಸುಮಾರು ಸಂಜೆ ೫:೩೨ ರ ಹೊತ್ತಿಗೆ ಚಂದ್ರಗ್ರಹಣ ಮುಗಿಯಲು ಪ್ರಾರಂಭಿಸುತ್ತದೆ" ಎಂದು ಅವರು ನೀಡಿರುವ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಆದರೆ ಈ ಬಾಹ್ಯಾಕಾಶ ಸುಂದರ ದೃಶ್ಯ ಹೈದರಾಬಾದಿನಲ್ಲಿ ಕಾಣಲಾಗುವುದಿಲ್ಲ ಏಕೆಂದರೆ ಚಂದ್ರ ಇನ್ನು ಮೇಲೆ ಉದಯವಾಗಿರುವುದಿಲ್ಲ ಎಂದು ಸಿದ್ಧಾರ್ಥ್ ಹೇಳಿದ್ದಾರೆ. "ನಿಜವಾಗಿ ಗ್ರಹಣದ ವೇಳೆ ಚಂದ್ರ ಸಂಪೂರ್ಣವಾಗಿ ಮರೆಯಾಗಿರುವುದಿಲ್ಲ ಆದರೆ ಕೆಂಪಾಗಿ ಹೊಳೆಯುತ್ತದೆ. ಇದನ್ನು ರಕ್ತ ಚಂದ್ರ ಎಂದು ಕರೆಯುತ್ತಾರೆ" ಎಂದು ಅವರು ತಿಳಿಸಿದ್ದಾರೆ.