2ನೇ ಮಾರ್ಸ್ ಆರ್ಬಿಟರ್‌ಗೆ ಇಸ್ರೋ ಸಜ್ಜು ಮಾರ್ಸ್ ಆರ್ಬಿಟರಿ ಮಿಷನ್(ಮಾಮ್) ಉಪಗ್ರಹ ಉಡಾವಣೆ ಯಶಸ್ವಿಯಾದ... ಮಾರ್ಸ್ ಆರ್ಬಿಟರಿ ಮಿಷನ್(ಮಾಮ್) ಉಪಗ್ರಹ ಉಡಾವಣೆ ಯಶಸ್ವಿಯಾದ ಬೆನ್ನಲ್ಲೇ ಭಾರತೀಯ ಬಾಹ್ಯಾಕಾಶ ಸಂಶೋದನಾ ಸಂಸ್ಥೆ (ಇಸ್ರೋ) ಎರಡನೇ ಮಾಮ್ ಸಿದ್ಧತೆಗೆ ಸಜ್ಜಾಗಿದೆ. ಇಸ್ರೋದ ಮಹತ್ವಾಕಾಂಕ್ಷೆಯ ಯೋಜನೆ ಮಾರ್ಸ್ ಆರ್ಬಿಟರಿ ಮಿಷನ್ ಯಶಸ್ವಿಯಾಗಿ ಉಡಾವಣೆಯಾಯಿತು. ಈ ಹಿನ್ನಲೆಯಲ್ಲಿ ಇಸ್ರೋ 2ನೇ ಮಾಮ್ ಸಿದ್ಧತೆಗೆ ಸಜ್ಜಾಗಿದ್ದು, 2018ರ ಗುರಿ ಹೊಂದಿದೆ. ಇಸ್ರೋದ ಸ್ಯಾಟಲೈಟ್ ಸೆಂಟರ್ ನಿರ್ದೇಶಕ ಎಸ್. ಶಿವಕುಮಾರ್ ಅವರು ಈ ಮಾಹಿತಿಯನ್ನು ನೀಡಿದ್ದಾರೆ. 2018ರೊಳಗೆ ಇಸ್ರೋ ಎರಡನೇ ಮಾಮ್‌ನ್ನು ಉಡಾವಣೆ ಮಾಡುವ ಗುರಿ ಹೊಂದಿದೆ. ಇದಕ್ಕೆ ಸರ್ಕಾರ ಪೂರ್ಣ ಬೆಂಬಲ ನೀಡುವುದಾಗಿ ಹೇಳಿದೆ ಎಂದು ತಿಳಿಸಿದ್ದಾರೆ. 2014 ಸೆಪ್ಟೆಂಬರ್ 24ರಂದು ಮಾಮ್ ಉಪಗ್ರಹವನ್ನು ಉಡಾವಣೆ ಮಾಡಲಾಯಿತು. ಈ ಉಪಗ್ರಹ ಆಘ್ರಾಣಿಸುವ, ರುಚಿಹಿಡಿಯುವ ಮತ್ತು ಮಂಗಳ ವಾತಾವರಣವನ್ನು ಗಮನಿಸುವ ಸಾಧನಗಳನ್ನು ಒಳಗೊಂಡಿದೆ. ದೇಶೀಯವಾಗಿ ನಿರ್ಮಿತ 5 ಪೇಲೋಡ್‌ಗಳನ್ನು ಈ ಉಪಗ್ರಹ ಹೊಂದಿದೆ. ಇದು ಮಂಗಳಗ್ರಹದಲ್ಲಿ ಜೀವಿಗಳಿರುವ ಸಾಧ್ಯತೆ ಕುರಿತು ಪರೀಕ್ಷೆ ನಡೆಸಲಿದೆ.