ಭೂಮಿ ವಾತಾವರಣಕ್ಕೆ ಚಂದ್ರಯಾನ-3 ರಾಕೆಟ್ ಅನಿಯಂತ್ರಿತ ಮರು-ಪ್ರವೇಶ: ಇಸ್ರೋ ಭಾರತದ ಹೆಮ್ಮೆಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ಈ ಹಿಂದೆ ಉಡಾವಣೆ ಮಾಡಿದ್ದ ಚಂದ್ರಯಾನ 3 ( 3) ಲಾಂಚ್ ವೆಹಿಕಲ್ ( ) ಮೇಲ್ಭಾಗವು ಭೂಮಿಯ ವಾತಾವರಣಕ್ಕೆ ಮರು ಪ್ರವೇಶಿಸಿದ್ದು( ), ಉತ್ತರ ಫೆಸಿಫಿಕ್ ಸಮುದ್ರದಲ್ಲಿ ( ) ಬೀಳಬಹುದು ಎಂದು ತಿಳಿದುಬಂದಿದೆ. ಬೆಂಗಳೂರು: ಭಾರತದ ಹೆಮ್ಮೆಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ಈ ಹಿಂದೆ ಉಡಾವಣೆ ಮಾಡಿದ್ದ ಚಂದ್ರಯಾನ 3 ( 3) ಲಾಂಚ್ ವೆಹಿಕಲ್ ( ) ಮೇಲ್ಭಾಗವು ಭೂಮಿಯ ವಾತಾವರಣಕ್ಕೆ ಮರು ಪ್ರವೇಶಿಸಿದ್ದು( ), ಬಹುಶಃ ಉತ್ತರ ಫೆಸಿಫಿಕ್ ಸಮುದ್ರದಲ್ಲಿ ( ) ಬೀಳಬಹುದು ಎಂದು ತಿಳಿದುಬಂದಿದೆ.ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ() ಈ ಬಗ್ಗೆ ಮಾಹಿತಿ ನೀಡಿದ್ದು, “ಎಲ್‌ವಿಎಂ3 ಎಂ4 (LVM3 M4 ) ಉಡಾವಣಾ ವಾಹನದ ಕ್ರಯೋಜೆನಿಕ್ ಮೇಲಿನ ಭಾಗವು ಭೂಮಿಯ ವಾತಾವರಣಕ್ಕೆ ಬುಧವಾರ ಸುಮಾರು 14:42ರ ಅವಧಿಯಲ್ಲಿ ಅನಿಯಂತ್ರಿತ ಮರು ಪ್ರವೇಶ ಮಾಡಿದ್ದು, ಬಹುಶಃ ಫೆಸಿಫಿಕ್ ಸಮುದ್ರದಲ್ಲಿ ಬೀಳುವ ಸಾಧ್ಯತೆ ಇದೆ. ಈ ರಾಕೆಟ್ ಬಾಡಿ ( 57321) ಜುಲೈ 14 ರಂದು 21.3 ಡಿಗ್ರಿ ಇಳಿಜಾರಿನೊಂದಿಗೆ 133 ಕಿಮೀ 35823 ಕಿಮೀ ಉದ್ದೇಶಿತ ಕಕ್ಷೆಗೆ ಚಂದ್ರಯಾನ-3 ಬಾಹ್ಯಾಕಾಶ ನೌಕೆಯನ್ನು ಯಶಸ್ವಿಯಾಗಿ ಇಂಜೆಕ್ಟ್ ಮಾಡಿದ ವಾಹನದ ಭಾಗವಾಗಿದೆ ಎಂದು ಇಸ್ರೋ ಹೇಳಿದೆ.ಇದನ್ನೂ ಓದಿ: ವಿವಾದದ ನಡುವೆ 'ಆತ್ಮಚರಿತ್ರೆ' ಪ್ರಕಟಣೆಯಿಂದ ಹಿಂದೆ ಸರಿದ ಇಸ್ರೋ ಅಧ್ಯಕ್ಷ ಎಸ್. ಸೋಮನಾಥ್ಲಾಂಚ್ ಆದ 124 ದಿನಗಳ ಬಳಿಕ ರಾಕೆಟ್ ಬಾಡಿ ವಾಪಸ್ ಭೂಮಿಯ ವಾತಾವರಣವನ್ನು ಪ್ರವೇಶಿಸಿದೆ. ಇಂಟರ್-ಏಜೆನ್ಸಿ ಸ್ಪೇಸ್ ಡೆಬ್ರಿಸ್ ಕೋಆರ್ಡಿನೇಷನ್ ಕಮಿಟಿ (ಐಎಡಿಸಿ) (- ) ಶಿಫಾರಸು ಮಾಡಿದ ಲೋ ಅರ್ಥ್ ಆರ್ಬಿಟ್ ಆಬ್ಜೆಕ್ಟ್‌ ( )ಗಳಿಗೆ 25 ವರ್ಷಗಳ ನಿಯಮವನ್ನು ಸಂಪೂರ್ಣವಾಗಿ ಅನುಸರಿಸುತ್ತಿದೆ ಎಂದು ಇಸ್ರೋ ತನ್ನ ಹೇಳಿಕೆಯಲ್ಲಿ ತಿಳಿಸಿದೆ.ಚಂದ್ರಯಾನ 3 ಭಾರತದ ಮೂರನೇ ಲೂನಾರ್ ಮಿಷನ್ ಆಘಿದ್ದು, ಜುಲೈ 14ರಂದು ಸತೀಶ್ ಧವನ್ ಸ್ಪೇಸ್ ಸೆಂಟರ್‌ನಿಂದ ಉಡಾವಣೆಯಾಗಿತ್ತು. ಒಂದು ತಿಂಗಳ ಬಳಿಕ ಚಂದ್ರಯಾನ -3 (-3)ರ ವಿಕ್ರಮ್ ಲ್ಯಾಂಡರ್ ( ), ಪ್ರಗ್ಯಾನ್ ರೋವರ್‌ ( )ನೊಂದಿಗೆ ಚಂದ್ರನ ದಕ್ಷಿಣ ಧ್ರುವದಲ್ಲಿ 23ರಂದು ಲ್ಯಾಂಡ್ ಆಗಿತ್ತು. ಇದರೊಂದಿಗೆ ದಕ್ಷಿಣ ಧ್ರುವ ತಲುಪಿದ ಜಗತ್ತಿನ ಮೊದಲ ರಾಷ್ಟ್ರವಾಗಿದೆ.ಇದನ್ನೂ ಓದಿ: ಅರಣ್ಯ ಹಾಗೂ ಜೌಗು ಪ್ರದೇಶಗಳ ವಿವರ ಒಳನೋಟ ನೀಡಲಿರುವ ನಾಸಾ-ಇಸ್ರೋ ರಡಾರ್ ಉಪಗ್ರಹಲ್ಯಾಂಡ್ ಆದ 10 ದಿನಗಳ ಬಳಿಕ ವಿಕ್ರಮ್ ಲ್ಯಾಂಡರ್ ಮತ್ತು ಪ್ರಜ್ಞಾನ್ ರೋವರ್ ಸ್ಲೀಪ್ ಮೋಡ್‌ಗೆ ಹೋಗಿದ್ದವು. ಈ ಮಧ್ಯೆ, ಲ್ಯಾಂಡರ್ ನಿಂದ ಬೇರ್ಪಟ್ಟ ಚಂದ್ರಯಾನ 3ರ ಪ್ರಪಲ್ಷನ್ ಮಾಡೆಲ್ ಈಗಲೂ ಚಂತ್ರದನ ಕಕ್ಷೆಯಲ್ಲಿ ಸುತ್ತುತ್ತಿದೆ. ‌2019ರಲ್ಲಿ ಇಸ್ರೋ ಚಂದ್ರಯಾನ 2 ಮಿಷನ್ ಅನ್ನು ಇಸ್ರೋ ಕೈಗೊಂಡಿತ್ತು. ಆದರೆ, ಚಂದ್ರನ ನಿರ್ದಿಷ್ಟ ಜಾಗದಲ್ಲಿ ಇಳಿಯಲು ವಿಫಲವಾಗಿತ್ತು. ಇದಕ್ಕೂ ಮೊದಲು ಭಾರತವು ಚಂದ್ರಯಾನ-1 ಯಶಸ್ವಿಯಾಗಿ ಕೈಗೊಂಡಿತ್ತು.