ಜಿಯೋನಿ ಮೊಬೈಲ್ ತಯಾರಿಕೆ ಚೀನಾದ ಸ್ಮಾರ್ಟ್ ಫೋನ್ ತಯಾರಿಕಾ ಸಂಸ್ಥೆ ಜಿಯೋನಿ ಭಾರತದಲ್ಲಿ ಮೊಬೈಲ್ ಉತ್ಪಾದಿಸಲು ಮುಂದಾಗಿದೆ. ಈಯೋಜನೆಗಾಗಿ ಕಂಪನಿ ರು.330 ಕೋಟಿ ಬಂಡವಾಳ ತೊಡಗಿಸಲಿದೆ. ನವದೆಹಲಿ: ಚೀನಾದ ಸ್ಮಾರ್ಟ್ ಫೋನ್ ತಯಾರಿಕಾ ಸಂಸ್ಥೆ ಜಿಯೋನಿ ಭಾರತದಲ್ಲಿ ಮೊಬೈಲ್ ಉತ್ಪಾದಿಸಲು ಮುಂದಾಗಿದೆ. ಈಯೋಜನೆಗಾಗಿ ಕಂಪನಿ ರು.330 ಕೋಟಿ ಬಂಡವಾಳ ತೊಡಗಿಸಲಿದೆ. ಮತ್ತೆರಡು ವಿದೇಶಿ ಕಂಪನಿಗಳಾದ ಕ್ರಿಯೋಮಿ ಮತ್ತು ಮೋಟೊರೊಲಾ ಈಗಾಗಲೆ ಭಾರತದಲ್ಲಿ ಮೊಬೈಲ್ ಉತ್ಪಾದನೆಗೆ ಮುಂದಾಗಿವೆ. ಜಿಯೋನಿ ಭಾರತದಲ್ಲಿ ಉತ್ಪಾದನೆ ಆರಂಭಿಸಲು ಸ್ಮಾರ್ಟ್ ಫೋನ್ ತಯಾರಿಕೆ ಕಂಪನಿಗಳಾದ ಫಾಕ್ಸ್ ಕಾನ್ ಮತ್ತು ಡಿಕ್ಸನ್ ಜೊತೆ ಪಾಲುದಾರಿಕೆ ಮಾಡಿಕೊಂಡಿದೆ. ಡಿಕ್ಸನ್ ಮತ್ತು ಫಾಕ್ಸ್ ಕಾನ್ ಕಂಪನಿಗಳು ಕ್ರಮವಾಗಿ ದೆಹಲಿ ಮತ್ತು ಆಂಧ್ರಪ್ರದೇಶದಲ್ಲಿ ತಯಾರಿಕಾ ಘಟಕಗಳನ್ನು ಹೊಂದಿದ್ದು ಇಲ್ಲೇ ಮೊಬೈಲ್ ಉತ್ಪಾದಿಸಲಾಗುವುದು ಎಂದು ಕಂಪನಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಫಾಕ್ಸ್ ಕಾನ್ ಜಿಯೋನಿ ಕಂಪನಿಯ ಈಗಿರುವ ಎಫ್ ಮತ್ತು ಪಿ ಸೀರೀಸ್ ಮಾದರಿಗಳನ್ನು ಉತ್ಪಾದಿಸಿದರೆ, ಡಿಕ್ಸನ್ ಸ್ಮಾಟ್ರ್ ಫೋನ್ ಮತ್ತು ಮುಂದಿನ ಹಂತದ ಮೊಬೈಲ್ ಗಳನ್ನು ತಯಾರಿಸಲಿದೆ. ಈ ಎರಡೂ ಪಾಲುದಾರ ಕಂಪನಿಗಳು ಮುಂದಿನ ತಿಂಗಳಿನಿಂದ ಜಿಯೋನಿ ಮೊಬೈಲ್‍ಗಳ ತಯಾರಿಕೆ ಆರಂಭಿಸಲಿವೆ. ಕೇಂದ್ರ ಸರ್ಕಾರದ ಮೇಕ್ ಇನ್ ಇಂಡಿಯಾ ಭಾರತದಲ್ಲಿ ತಯಾರಿಕೆಗೆ ಅವಕಾಶ ಮಾಡಿಕೊಟ್ಟಿರುವುದಲ್ಲದೆ ದೇಶದ ಆರ್ಥಿಕ ಪ್ರಗತಿಯಲ್ಲಿ ಪಾಲುದಾರರಾಗಲೂ ಅವಕಾಶ ಕಲ್ಪಿಸಿದೆ ಎಂದು ಕಂಪನಿಯ ಭಾರತೀಯ ವಿಭಾಗದ ಸಿಇಒ ಮತ್ತು ಎಂಡಿ ಅರವಿಂದ್ ಆರ್ ವೋಹ್ರಾ ಅಭಿಪ್ರಾಯಪಟ್ಟಿದ್ದಾರೆ.