ಸ್ಯಾಮ್‌ಸಂಗ್‌ನ ಹೆಲ್ತ್ ಸಾಂಗ್ ಇಂದು ಮೊಬೈಲ್‌ಗೆ ಅಡಿಕ್ಟ್ ಆಗಿ, ಮಾನಸಿಕ ಆರೋಗ್ಯ ಕಳೆದುಕೊಂಡವರು ಲೆಕ್ಕವೇ ಇಲ್ಲ. ಆದರೆ, ಇಂಥವರಿಗಾಗಿಯೇ ಕಂಪನಿಗಳೂ ಆ್ಯಪ್‌ಗಳನ್ನು ಬಿಟ್ಟಿವೆ. ಅದರಲ್ಲೂ ಸ್ಯಾಮ್‌ಸಂಗ್ ಕಂಪನಿ ಇತ್ತೀಚೆಗೆ 'ಎಸ್ ಹೆಲ್ತ್ ಬಡ್ಡಿ' ಆ್ಯಪ್ ಅಂತಲೇ ಬಿಡುಗಡೆಮಾಡಿದೆ. ಇದನ್ನು ಗೂಗಲ್ ಪ್ಲೇ ಸ್ಟೋರ್‌ನಿಂದ ಉಚಿತವಾಗಿ ಡೌನ್‌ಲೋಡ್ ಮಾಡಿಕೊಳ್ಳಬಹುದು. ಆರೋಗ್ಯ ಸಂಬಂಧಿತ ಅನೇಕ ಮಾಹಿತಿಗಳನ್ನು ಇಲ್ಲಿ ಪಡೆದುಕೊಳ್ಳಬಹುದು. ಅಂದಹಾಗೆ, ಸ್ಯಾಮ್‌ಸಂಗ್ ಕಂಪನಿ ಹೆಲ್ತ್ ಮಾರ್ಕೇಟನ್ನು ಪ್ರವೇಶಿಸಿದ್ದು ಇದೇ ಮೊದಲಲ್ಲ. ಕಳೆದವರ್ಷ ಎಸ್ ಹೆಲ್ತ್ ಆ್ಯಪ್ ಅನ್ನೂ ಬಿಟ್ಟಿತ್ತು. ಆದರೆ, ಅದು ಅಷ್ಟು ಸಕ್ಸಸ್ ಕಂಡಿರಲಿಲ್ಲ. ಇದೇನಾಗುತ್ತೋ ಗೊತ್ತಿಲ್ಲ.