ಫೈಲ್ ವರ್ಗಾವಣೆಗೆ ಕೇವಲ ಸ್ಪರ್ಶ ಸಾಕು! ಒಂದು ಸ್ಮಾರ್ಟ್‌ಫೋನ್‌ನಿಂದ ಇನ್ನೊಂದು ಟ್ಯಾಬ್ಲೆಟ್‌ಗೆ ಫೋಟೋ, ವಿಡಿಯೋ ವರ್ಗಾಯಿಸಬೇಕೆಂದರೆ ಇನ್ನು ಕಷ್ಟಪಡಬೇಕಾಗಿಲ್ಲ.... ಒಂದು ಸ್ಮಾರ್ಟ್‌ಫೋನ್‌ನಿಂದ ಇನ್ನೊಂದು ಟ್ಯಾಬ್ಲೆಟ್‌ಗೆ ಫೋಟೋ, ವಿಡಿಯೋ ವರ್ಗಾಯಿಸಬೇಕೆಂದರೆ ಇನ್ನು ಕಷ್ಟಪಡಬೇಕಾಗಿಲ್ಲ. ಒಂದೇ ಒಂದು ಸ್ಪರ್ಶ ಸಾಕು, ಫೋಟೋ ಮೂವ್ ಮಾಡಲು! ಹೌದು. ಫಿನ್ಲೆಂಡ್ ವಿಜ್ಞಾನಿಗಳು ಇಂತಹ ಹೊಸ ತಂತ್ರಜ್ಞಾನವೊಂದನ್ನು ಅಭಿವೃದ್ಧಿಪಡಿಸಿದ್ದಾರೆ. ಇಲ್ಲಿ ಒಂದೊ ಉಂಗುರ ಅಥವಾ ಸ್ಟ್ರಕ್ಚರ್ ನೈಲ್ ಅಥವಾ ರಿಸ್ಟ್‌ಬ್ಯಾಂಡ್ ಯೂಸರ್ ಇಂಟರ್‌ಫೇಸ್‌ನಂತೆ ಕಾರ್ಯನಿರ್ವಹಿಸುತ್ತವೆ. ಹೀಗಾಗಿ ಕೇವಲ ಸ್ಪರ್ಶದ ಮೂಲಕ ಒಂದು ಸ್ಕ್ರೀನ್‌ನಿಂದ ಇನ್ನೊಂದು ಸ್ಕ್ರೀನ್‌ಗೆ ಫೋಟೋ, ವಿಡಿಯೋ ವರ್ಗಾಯಿಸಬಹುದು. ಈ ಹೊಸ 'ಇನ್‌ಟಚ್ ಯೂಸರ್ ಇಂಟರ್‌ಫೇಸ್‌' ಅನ್ನು ಫಿನ್ಲೆಂಡ್‌ನ ವಿಟಿಟಿ ತಾಂತ್ರಿಕ ಸಂಶೋಧನಾ ಕೇಂದ್ರ ಅಭಿವೃದ್ಧಿಪಡಿಸಿದೆ. ಸ್ಟ್ರಕ್ಟರ್ ನೈಲ್ ಮೂಲಕ ಒಂದು ಸ್ಕ್ರೀನ್‌ನಲ್ಲಿನ ಫೈಲ್ ಅನ್ನು ಸ್ಪರ್ಶಿಸಬೇಕು. ನಂತರ ಆ ನೈಲ್ ಅನ್ನು ಇನ್ನೊಂದು ಫೋನ್‌ಗೆ ತಾಗಿಸಿದರೆ ಫೈಲ್ ವರ್ಗಾವಣೆ ಕೆಲಸ ಪೂರ್ಣ ಎನ್ನುತ್ತಾರೆ ವಿಜ್ಞಾನಿಗಳು.