ನೆಟ್ ಬ್ರೌಸಿಂಗ್‌ ಭಾರತ ನಂ.3 ಜಾಗತಿಕ ಅಂತರ್ಜಾಲ ಬಳಕೆದಾರರ ಪಟ್ಟಿಯಲ್ಲಿ ಭಾರತ 3ನೇ ಸ್ಥಾನಕ್ಕೆ ಬಡ್ತಿ ಪಡೆದಿದೆ. ಚೀನಾ, ಅಮೆರಿಕ ನಂತರದ ಸ್ಥಾನವನ್ನು ಭಾರತ ಪಡೆದಿದೆ. ಚೀನಾದಲ್ಲಿ 34.82 ಕೋಟಿ, ಅಮೆರಿಕ 19.14 ಕೋಟಿ ಹಾಗೂ ಭಾರತದಲ್ಲಿ 7.39 ಕೋಟಿ ಅಂತರ್ಜಾಲ ಬಳಕೆದಾರರಿದ್ದಾರೆ. ಪ್ರಸಕ್ತ ಆರ್ಥಿಕ ವರ್ಷದಲ್ಲಿ ಶೇ.31ರಷ್ಟು ಬೆಳವಣಿಗೆಯಾಗಿದೆ. ಇನ್ನು ಬ್ರೆಜಿಲ್‌ನಲ್ಲಿ ಬೆಳವಣಿಗೆ ಪ್ರಮಾಣ ಶೇ.36ರಷ್ಟಿದ್ದು ಮೊದಲನೆ ಸ್ಥಾನದಲ್ಲಿದೆ. ಭಾರತದಲ್ಲಿ ಅಂತರ್ಜಾಲ ಬಳಸುವವರ ಸರಾಸರಿ ವಯಸ್ಸು 35. ಆದರೆ ಮಹಿಳೆಯರಲ್ಲಿ 35ರಿಂದ 44 ವರ್ಷದವರು ಹೆಚ್ಚಿನ ಸಂಖ್ಯೆಯಲ್ಲಿ ವೆಬ್ ನೋಡುತ್ತಾರೆ ಎಂದು ಸಮೀಕ್ಷೆ ಹೇಳುತ್ತದೆ.