ಎಚ್ಚರ! ನಿಷೇಧಿತ ಸೈಟ್ ಗಳಿಗಾಗಿ ಶೋಧ ನಡೆಸಿದರೆ 3 ವರ್ಷ ಜೈಲು ಪೋರ್ನೋಗ್ರಫಿ, ಕಾನೂನು ಬಾಹಿರ ಅಂತರ್ಜಾಲ ಬಳಕೆ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಿರುವ ಕೇಂದ್ರ ಸರ್ಕಾರ ನಿಷೇಧಿತ ವೆಬ್ ಸೈಟ್ ಗಳಿಗಾಗಿ ಹುಡುಕಾಟ ನಡೆಸುವವರಿಗೆ 3 ವರ್ಷಗಳ ಜೈಲು ಶಿಕ್ಷೆ ವಿಧಿಸುವ ಕುರಿತು ನಿರ್ಧಾರ ಕೈಗೊಂಡಿದೆ. ನವದೆಹಲಿ: ಪೋರ್ನೋಗ್ರಫಿ, ಕಾನೂನು ಬಾಹಿರ ಅಂತರ್ಜಾಲ ಬಳಕೆ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಿರುವ ಕೇಂದ್ರ ಸರ್ಕಾರ ನಿಷೇಧಿತ ವೆಬ್ ಸೈಟ್ ಗಳಿಗಾಗಿ ಹುಡುಕಾಟ ನಡೆಸುವವರಿಗೆ 3 ವರ್ಷಗಳ ಜೈಲು ಶಿಕ್ಷೆ ವಿಧಿಸುವ ಕುರಿತು ನಿರ್ಧಾರ ಕೈಗೊಂಡಿದೆ. ಕಾನೂನು ಬಾಹಿರ ಅಂತರ್ಜಾಲ ಬಳಕೆ ಕುರಿತಂತೆ ಕಠಿಣ ಕಾನೂನು ಜಾರಿಗೆ ಮುಂದಾಗಿರುವ ಕೇಂದ್ರ ಸರ್ಕಾರ ಕಳೆದ 2015ರ ಆಗಸ್ಟ್ ನಲ್ಲಿ 857ಕ್ಕೂ ಅಧಿಕ ಅನಧಿಕೃತ ವೆಬ್ ಸೈಟ್ ಗಳ ಮೇಲೆ ನಿಷೇಧ ಹೇರಿತ್ತು. ಇದಲ್ಲದೆ 170ಕ್ಕೂ ಅಧಿಕ ಪೋರ್ನೋಗ್ರಫಿ ಸೈಟ್ ಗಳನ್ನು ಕೂಡ ಕೇಂದ್ರ ಸರ್ಕಾರ ಭಾರತದಲ್ಲಿ ನಿಷೇಧ ಹೇರಿತ್ತು. ಹೀಗಿದ್ದೂ ಪ್ರಾಕ್ಸಿ ಸರ್ವರ್ ಗಳ ಮೂಲಕ ಅಂತರ್ಜಾಲ ಬಳಕೆದಾರರು ಈ ನಿಷೇಧಿತ ವೆಬ್ ಸೈಟ್ ಗಳ ಬಳಕೆ ಮಾಡುತ್ತಿರುವುದರಿಂದ ಕೇಂದ್ರ ಸರ್ಕಾರ ಕಠಿಣ ಕ್ರಮಕ್ಕೆ ಮುಂದಾಗಿದೆ. ಈ ನಿಷೇಧಿತ ವೆಬ್ ಸೈಟ್ ಗಳ ಯುಆರ್ ಎಲ್ () ಗಳನ್ನು ನಿಷೇಧ ಮಾಡುವುದಷ್ಟೇ ಅಲ್ಲದೇ ಈ ಯುಆರ್ ಎಲ್ ಗಳ ಶೋಧ ನಡೆಸುವವರ ವಿರುದ್ಧವೂ ಕೇಂದ್ರ ಸರ್ಕಾರ ದೂರು ದಾಖಲಿಸಿಕೊಂಡು ಇಂತಹವರಿಗೆ 3 ವರ್ಷಗಳ ಜೈಲು ಶಿಕ್ಷೆವಿಧಿಸುವುದಾಗಿ ತಿಳಿಸಿದೆ. ಪ್ರಕರಣ ಗಂಭೀರವಾಗಿದ್ದರೆ ಜೈಲು ಶಿಕ್ಷೆಯೊಂದಿಗೆ 3 ಲಕ್ಷ ರು.ಗಳ ದಂಡ ವಿಧಿಸಲೂ ಕೂಡ ಸರ್ಕಾರ ನಿರ್ಧರಿಸಿದೆ. ನಿಷೇಧಿತ ಯುಆರ್ ಎಲ್ ಗಳಿಗಾಗಿ ಜಾಲಾಡುವ ಕಂಪ್ಯೂಟರ್ ಗಳ ಐಪಿ ಅಡ್ರೆಸ್ ಜಾಡು ಹಿಡಿದು, ಅದರ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸೈಬರ್ ಪೊಲೀಸರಿಗೆ ಸೂಚಿಸಲಾಗಿದೆ ಎಂದು ತಿಳಿದುಬಂದಿದೆ.