ಮೊದಲ ವಿದ್ಯುಚ್ಚಕ್ತಿ ವಿಮಾನ ಅಭಿವೃದ್ಧಿಪಡಿಸಿದ ಚೈನಾ ವಿಶ್ವದ ಮೊದಲ ವಿದ್ಯುಚ್ಛಕ್ತಿ ವಿಮಾನವನ್ನು ಚೈನಾ ಅಧಿಕಾರಿಗಳು ಅಭಿವೃದ್ಧಿಪಡಿಸಿದ್ದಾರೆ ಎಂದು ಮಾಧ್ಯಮವೊಂದು ಶುಕ್ರವಾರ ವರದಿ ಮಾಡಿದೆ. ಬೀಜಿಂಗ್: ವಿಶ್ವದ ಮೊದಲ ವಿದ್ಯುಚ್ಛಕ್ತಿ ವಿಮಾನವನ್ನು ಚೈನಾ ಅಧಿಕಾರಿಗಳು ಅಭಿವೃದ್ಧಿಪಡಿಸಿದ್ದಾರೆ ಎಂದು ಮಾಧ್ಯಮವೊಂದು ಶುಕ್ರವಾರ ವರದಿ ಮಾಡಿದೆ. 'ಬಿಎಕ್ಸ್೧ಇ" ಹೆಸರಿನ ವಿಮಾನದ ರೆಕ್ಕೆ ೧೪.೫ ಮೀಟರ್ ಉದ್ದವಿದ್ದು, ೨೩೦ ಕೆಜಿ ತೂಕವನ್ನು ಹೊರಬಲ್ಲದ್ದಾಗಿದೆ. ಭೂಮಟ್ಟದಿಂದ ೩೦೦೦ ಮೀಟರ್ ಮೇಲೆ ಈ ವಿಮಾನ ಹಾರಬಲ್ಲುಡಾಗಿದೆ ಎಂದು ವರದಿ ಮಾಡಲಾಗಿದೆ. ಈ ವಿಮಾನವನ್ನು ೨ ಘಂಟೆಗಳಲ್ಲಿ ಚಾರ್ಜ್ ಮಾಡಬಹುದಾಗಿದ್ದು, ಗರಿಷ್ಠ ಘಂಟೆಗೆ ೧೬೦ ಕಿಮೀ ವೇಗದಲ್ಲಿ ೪೫ ನಿಮಿಷಗಳಿಂದ ೧ ಘಂಟೆ ಹಾರಾಟ ನಡೆಸಬಲ್ಲದ್ದಾಗಿದೆ. ಶೆನ್ಯಾಂಗ್ ಏರೋಸ್ಪೇಸ್ ವಿಶ್ವವಿದ್ಯಾಲಯ ಮತ್ತು ಲಿಯೋನಿಂಗ್ ಜನರಲ್ ಏವಿಯೇಶನ್ ಅಕಾಡೆಮಿ ಈ ವಿಮಾನವನ್ನು ಜಂಟಿಯಾಗಿ ಅಭಿವೃದ್ಧಿಪಡಿಸಿವೆ. ಉತ್ಪಾದಕರ ಪ್ರಕಾರ ಈ ವಿಮಾನವನ್ನು ಪೈಲಟ್ಗಳ ತರಬೇತಿಗೆ, ಪ್ರವಾಸೋದ್ಯಮಕ್ಕೆ ಮತ್ತು ರಕ್ಷಣಾ ಕಾರ್ಯಾಚರಣೆಗಳಿಗೆ ಬಳಸಬಹುದಾಗಿದೆ. ಈ ವಿಮಾನದ ಬೆಲೆ ಸುಮಾರು ಒಂದು ಮಿಲಿಯನ್ ಯಾನ್ (೧೬೩೦೦೦ ಡಾಲರ್ಗಳು).