ತನ್ನ ರಾಕೆಟ್ ಗಳಿಗೆ ಪರಿಸರ ಸ್ನೇಹಿ ಇಂಧನ ಅಭಿವೃದ್ಧಿಪಡಿಸಲು 'ಇಸ್ರೋ' ಮುಂದು! ಭಾರತದ ಹೆಮ್ಮೆಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋ ಇದೀಗ ಮತ್ತೊಂದು ಮಹತ್ವದ ಯೋಜನೆಯನ್ನು ಕೈಗೆತ್ತಿಕೊಂಡಿದ್ದು, ಓಜೋನ್ ಪದರಕ್ಕೆ ಧಕ್ಕೆಯಾಗದಂತಹ ಪರಿಸರ ಸ್ನೇಹಿ ರಾಕೆಟ್ ಇಂಧನಗಳ ಸಂಶೋಧನೆಯಲ್ಲಿ ತೊಡಗಿದೆ.