ಇನ್ನು 33 ದಿನಗಳಲ್ಲಿ ಶುಭಮಂಗಳ ಶನಿವಾರಕ್ಕೆ ಸರಿಯಾಗಿ ಇನ್ನೊಂದು ತಿಂಗಳು.., ದೇಶದ ಬಹುದೊಡ್ಡ... ಚೆನ್ನೈ: ಶನಿವಾರಕ್ಕೆ ಸರಿಯಾಗಿ ಇನ್ನೊಂದು ತಿಂಗಳು.., ದೇಶದ ಬಹುದೊಡ್ಡ ಕನಸು ನನಸಾಗಲಿದೆ! ಭಾರತ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಹತ್ವದ ಮೈಲುಗಲ್ಲು ಸಾಧಿಸಲು, ದೇಶದ ವಿಜ್ಞಾನಿಗಳ ಮಹತ್ವಾಕಾಂಕ್ಷೆ ತಿಂಗಳು ಕಾದರೆ ಸಾಕು. ಏನೆಂದು ಅರ್ಥವಾಗಲಿಲ್ಲವೇ? ಇನ್ನು ತಿಂಗಳಲ್ಲಿ ಅಂದರೆ ಸೆ.24ಕ್ಕೆ ಭಾರತದ ಮಾರ್ಸ್ ಆರ್ಬಿಟರ್ ಮಂಗಳನ ಅಂಗಳವನ್ನು ಸ್ಪರ್ಶಿಸಲಿದೆ. ಭಾರತದ ಬಾಹ್ಯಾಕಶ ಸಂಶೋಧನಾ ಸಂಸ್ಥೆ (ಇಸ್ರೋ)ಯ ಕಠಿಣ ಪ್ರರಿಶ್ರಮಕ್ಕೆ ಪ್ರತಿಫಲ ದೊರೆಯಲಿದೆ. ವಿಜ್ಞಾನಿಗಳ ಕನಸು ನನಸಾಗಲಿದೆ. ಮಂಗಳನತ್ತ ಪಯಣ ಬೆಳೆಸಿರುವ ಮಾರ್ಸ್ ಅರ್ಬಿಟರ್ ಮಿಷನ್(ಎಂಒಎಂ) ಈಗ ಕೆಂಪುಗ್ರಹದಿಂದ ಕೇವಲ 90 ಲಕ್ಷ ಕಿ.ಮೀ ದೂರದಲ್ಲಿದೆ. ಅಂದರೆ ಭೂಮಿಯಿಂದ 18 ಕೋಟಿ ಕಿ.ಮೀ ದೂರಕ್ಕೆ ಬಾಹ್ಯಾಕಾಶ ನೌಕೆ ಸಾಗಿದೆ. ಇನ್ನು ಸರಿಯಾಗಿ 33(ದಿನಗಳ ಲೆಕ್ಕಾಚಾರದಲ್ಲಿ) ದಿನಗಳಲ್ಲಿ ಪಿಎಸ್‌ಎಲ್‌ವಿ ಬಾಹ್ಯಾಕಶ ನೌಕೆಯು ಕೆಂಪು ಗ್ರಹಕ್ಕೆ ಕಾಲಿಡಲಿದೆ ಎಂದು ಭಾರತೀಯತ ಬಾಹ್ಯಾಕಶ ಸಂಸ್ಥೆ ಇಸ್ರೋ ಸಾಮಾಜಿಕ ತಾಣದಲ್ಲಿ ಪ್ರಕಟಿಸಿದೆ. ಈ ಮಂಗಳ ಯೋಜನೆಯು ಗ್ರಹಗಳ ಬಗೆಗಿನ ಸಂಶೋಧನೆಯಲ್ಲಿ ವಿಜ್ಞಾನ ಸಮುದಾಯಕ್ಕೆ ಉತ್ತಮ ಅವಕಾಶಗಳನ್ನು ಒದಗಿಸಲಿದೆ. 'ಮಂಗಳ'ಯಾನ ಮಾರ್ಸ್ ಆರ್ಬಿಟರ್ ಪ್ರಯಾಣ ಆರಂಭಿಸಿದ್ದು-2013, ನವೆಂಬರ್ 5 ಎಲ್ಲಿಂದ?- ಆಂಧ್ರ ಪ್ರದೇಶದ ಶ್ರೀಹರಿಕೋಟಾ ಬಾಹ್ಯಾಕಾಶ ನೌಕೆ-ಪಿಎಸ್‌ಎಲ್‌ವಿ (ಧ್ರುವೀಯ ಉಪಗ್ರಹ ಉಡಾವಣಾ ವಾಹನ) ಯೋಜನೆಯ ವೆಚ್ಚ ರು.450 ಕೋಟಿ ನೌಕೆ ತಲುಪುವುದು ಸೆಪ್ಟೆಂಬರ್ 24