ಇಂಡಿಯನ್ ಟ್ರೂಕಾಲರ್! ಸತ್ಯ ಹೇಳುವ ಜನ ಕ್ರಮೇಣ ಕ್ಷೀಣಿಸುತ್ತಿದ್ದರೂ ಮೊಬೈಲ್ನಲ್ಲಿ ಟ್ರೂಕಾಲರ್ ಅಪ್ಲಿಕೇಶನ್ ಬಳಸುವವರ ಸಂಖ್ಯೆ ಮಾತ್ರ.. ಸತ್ಯ ಹೇಳುವ ಜನ ಕ್ರಮೇಣ ಕ್ಷೀಣಿಸುತ್ತಿದ್ದರೂ ಮೊಬೈಲ್ನಲ್ಲಿ ಟ್ರೂಕಾಲರ್ ಅಪ್ಲಿಕೇಶನ್ ಬಳಸುವವರ ಸಂಖ್ಯೆ ಮಾತ್ರ ಹೆಚ್ಚುತ್ತಲೇ ಇದೆ. ಪರಿಣಾಮ ಇಂದು ಟ್ರೂಕಾಲರ್ ಅಪ್ಲಿಕೇಶನ್ ಬಳಕೆದಾರರ ಸಂಖ್ಯೆ ಭಾರತದಲ್ಲೇ 6 ಲಕ್ಷಕ್ಕೂ ಹೆಚ್ಚು! ಜಗತ್ತಿನಾದ್ಯಾಂತ 30 ದಶಲಕ್ಷ ಮೊಬೈಲ್ ಬಳಕೆದಾರರು ಇದನ್ನು ಡೌನ್ಲೋಡ್ ಮಾಡಿಕೊಂಡಿದ್ದು ಟ್ರೂಕಾಲರ್ನ್ನು ಭಾರತೀಯರೇ ಹೆಚ್ಚು ಪ್ರಮಾಣದಲ್ಲಿ ಬಳಸುತ್ತಾರೆಂಬುದು ವಿಶೇಷ. ಮೊಬೈಲ್ನಲ್ಲಿ ಟ್ರೂಕಾಲರ್ ಜನ್ಮ ತಾಳಿ ಐದು ವರ್ಷ ಕಳೆದಿದ್ದು, ಇಂದು ಸ್ಮಾರ್ಟ್ಫೊನ್ ಬಳಸುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಪರಿಣಾಮ ಮೊಬೈಲ್ನಲ್ಲಿ ಟ್ರೂಕಾಲರ್ ಬಳಸುವವರ ಸಂಖ್ಯೆಯೂ ಹೆಚ್ಚಿದೆ. ಏನಿದು ಟ್ರೂಕಾಲರ್? ಮೊಬೈಲ್ನಲ್ಲಿ ಕರೆ ಮಾಡುಲು ಅಥವಾ ರಿಂಗಣಿಸುವ ಕರೆಗಳನ್ನು ಪರಿಶೀಲಿಸುವ ಸಾಧನವೇ ಈ ಟ್ರೂಕಾಲರ್. ವಿಶೇಷವಾಗಿ ಮೊಬೈಲ್ನಲ್ಲಿ ಸೇವ್ ಆಗದ ನಂಬರ್ನಿಂದ ಕರೆ ಮಾಡಿದವರ ಹೆಸರು ಹಾಗೂ ಮಾಹಿತಿ ತಿಳಿದುಕೊಳ್ಳಲು ಈ ಮುಂಚೆ ವಾಪಸ್ ರಿಂಗಣಿಸಬೇಕಿತ್ತು. ಆದರೆ ಟ್ರೂಕಾಲರ್ ಅವರ ಹೆಸರು ಹಾಗೂ ಮಾಹಿತಿಯನ್ನು ಒದಗಿಸುತ್ತದೆ. ಈ ಮೂಲಕ ಬಳಕೆದಾರರಿಗೆ ಸುರಕ್ಷತೆ ಮತ್ತು ದೂರವಾಣಿ ಸಂಖ್ಯೆಗಳ ಸಮುದಾಯ ಸಾಧಿಸಲು ಸಹಕಾರಿ ಆಗಲಿದೆ. ನಿಮಗೆ ಬೇಕಿದ್ದಾಗ ಮತ್ತು ಬೇಕಾದವರೊಡನೆ ಸಂಪರ್ಕ ಸಾಧಿಸಲು ಈ ಅಪ್ಲಿಕೇಶನ್ ಅನುಕೂಲವಾಗಲಿದೆ. ಮೊಬೈಲ್ ಫೋನ್ ಬುಕ್ ಸಾಮರ್ಥ್ಯ ಮೀರಿ ಸಂಪರ್ಕದ ಪಟ್ಟಿ ವಿಸ್ತರಿಸಲು ಇದು ಸಹಾಯವಾಗಲಿದೆ. ಟ್ರೂಕಾಲರ್ನ ವಿಶೇಷ ಬಳಕೆದಾರರು ಉಚಿತವಾಗಿ ಅಥವಾ ವಿಶೇಷ ಸದಸ್ಯತ್ವ ಪಡೆದುಕೊಳ್ಳಬಹುದು. ಈ ಅಪ್ಲಿಕೇಶನ್ ಜಾಹೀರಾತು ರಹಿತವಾಗಿದ್ದು ಬಳಕೆದಾರರು ವಿಶೇಷ ಅನುಭವ ನೀಡುತ್ತದೆ. ತಮ್ಮ ಪ್ರೊಫೈಲ್ ಯಾರು ಎಷ್ಟು ನಿಮಿಷದ ಹಿಂದೆ ನೋಡಿದರು ಎಂಬ ಮಾಹಿತಿ ತಿಳಿದುಕೊಳ್ಳಬಹುದು. ತಿಂಗಳ ಆರಂಭದಲ್ಲಿ ಬಳಕೆದಾರರು 30 ಸಂಪರ್ಕ ಕೋರಿಕೆ ಸಾಧಿಸಬಹುದು. ಈ ಕೋರಿಕೆಯನ್ನು ಆಧಾರವಾಗಿಟ್ಟುಕೊಂಡು ಇತರ ಟ್ರೂಕಾಲರ್ ಬಳಕೆದಾರರನ್ನು ಸಂಪರ್ಕಿಸಲು ಸಹಕಾರಿ ಆಗಲಿದೆ. ಟ್ರೂಕಾಲರ್ನ ಸೌಲಭ್ಯವನ್ನು ಐಒಎಸ್, ಆಂಡ್ರ್ಯಾಡ್, ವಿಂಡೋಸ್, ಬ್ಲಾಕ್ಬೆರ್ರಿ ಮತ್ತು ಸಿಂಬಿಯಾನ್ ಎಸ್60 ಮತ್ತು ಸ್ಮಾರ್ಟ್ಫೋನ್ಗಳಲ್ಲಿ ಪಡೆಯಬಹುದು.