ಇಸ್ರೋದ ಪಿಎಸ್ ಎಲ್ ವಿ- ಸಿ54 ರಾಕೆಟ್ ಉಡಾವಣೆಗೆ ಕೌಂಟ್ ಡೌನ್ ಆರಂಭ- ವಿಡಿಯೋ ಆಂಧ್ರ ಪ್ರದೇಶದ ಶ್ರೀಹರಿಕೋಟಾದ ಬಾಹ್ಯಾಕಾಶ ನಿಲ್ದಾಣದಿಂದ ಶನಿವಾರ ಭೂ ವೀಕ್ಷಣಾ ಉಪಗ್ರಹ ಓಷಿಯನ್ ಸ್ಯಾಟ್ ಮತ್ತಿತರ ಎಂಟು ಉಪಗ್ರಹಗಳನ್ನು ಹೊತ್ತ ಪಿಎಸ್ ಎಲ್ ವಿ ಸಿ-54 ರಾಕೆಟ್ ನಲ್ಲಿ ಉಡಾವಣೆಗೆ ಇಸ್ರೋ ವಿಜ್ಞಾನಿಗಳು ಕೌಂಟ್ ಡೌನ್ ಆರಂಭಿಸಿದ್ದಾರೆ. ಶ್ರೀಹರಿಕೋಟಾ: ಆಂಧ್ರ ಪ್ರದೇಶದ ಶ್ರೀಹರಿಕೋಟಾದ ಬಾಹ್ಯಾಕಾಶ ನಿಲ್ದಾಣದಿಂದ ಶನಿವಾರ ಭೂ ವೀಕ್ಷಣಾ ಉಪಗ್ರಹ ಓಷಿಯನ್ ಸ್ಯಾಟ್ ಮತ್ತಿತರ ಎಂಟು ಉಪಗ್ರಹಗಳನ್ನು ಹೊತ್ತ ಪಿಎಸ್ ಎಲ್ ವಿ ಸಿ-54 ರಾಕೆಟ್ ಉಡಾವಣೆಗೆ ಇಸ್ರೋ ವಿಜ್ಞಾನಿಗಳು ಕೌಂಟ್ ಡೌನ್ ಆರಂಭಿಸಿದ್ದಾರೆ.ಶನಿವಾರ ಬೆಳಗ್ಗೆ 11.56ಕ್ಕೆ ಪಿಎಸ್ ಎಲ್ ವಿಯ 56ನೇ ರಾಕೆಟ್ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆಯಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.ರಾಕೆಟ್‌ನ ಪ್ರಾಥಮಿಕ ಪೇಲೋಡ್ ಓಷನ್‌ಸ್ಯಾಟ್ ಆಗಿದ್ದು, ಇದನ್ನು ಕಕ್ಷೆ-1 ರಲ್ಲಿ ಬೇರ್ಪಡಿಸಲಾಗುತ್ತದೆ. ಇತರ ಎಂಟು ನ್ಯಾನೊ-ಉಪಗ್ರಹಗಳನ್ನು ಗ್ರಾಹಕರ ಅಗತ್ಯತೆಗಳ ಆಧಾರದ ಮೇಲೆ ವಿವಿಧ ಕಕ್ಷೆಗಳಲ್ಲಿ ಇರಿಸಲಾಗುತ್ತದೆ.# | : -C54 . -C54 . (: ) ../PDo6xrdrNR