ವಾಟ್ಸ್‌ಆ್ಯಪ್‌ಗೆ ಕಾಲಿಟ್ಟ ವಾಯ್ಸ್ ಮೆಸೇಜ್ ಜನಪ್ರಿಯ ಮೆಸೇಂಜಿಂಗ್ ಅಪ್ಲಿಕೇಶನ್ ಆದ ವಾಟ್ಸ್‌ಆ್ಯಪ್‌ಗೆ ವಾಯ್ಸ್ ಮೆಸೇಜಿಂಗ್ ಕಾಲಿಟ್ಟಿದೆ. ಸೆಂಡ್ ಬಟನ್ ಇರುವಲ್ಲೇ ವಾಯ್ಸ್ ರೆಕಾರ್ಡಿಂಗ್ ಬಟನ್ ನೀಡಲಾಗಿದೆ. ಅದನ್ನು ಒತ್ತಿ ಹಿಡಿದು, ಮೆಸೇಜ್ ರೆಕಾರ್ಡ್ ಮಾಡಿ, ಬಟನ್ ಬಿಟ್ಟರಾಯಿತು, ನಿಮ್ಮ ವಾಯ್ಸ್ ಮೆಸೇಜ್ ಹೋಗುತ್ತದೆ. ಸರಿಯಾಗಿ ರೆಕಾರ್ಡ್ ಆಗಿಲ್ಲ, ಕಳುಹಿಸುವುದು ಬೇಡ ಅಂದುಕೊಂಡರೆ ಎಡಕ್ಕೆ ಸ್ವೈಪ್ ಮಾಡಿದರಾಯಿತು, ರೆಕಾರ್ಡ್ ಡಿಲೀಟ್ ಆಗುತ್ತದೆ. ಇದರ ವಿಶೇಷವೆಂದರೆ ವಾಯ್ಸ್ ಮೆಸೇಜ್‌ಗೆ ಟೈಮ್ ಲಿಮಿಟ್ ಹಾಕಿಲ್ಲ. ಹೀಗಾಗಿ ದೀರ್ಘ ಭಾಷಣವಲ್ಲದಿದ್ದರೂ ನಿಮ್ಮ ಮಾತುಗಳನ್ನು ಸಂಪೂರ್ಣವಾಗಿ ಹೇಳಲು ಇಲ್ಲಿ ಅವಕಾಶವಿದೆ. ವಾಟ್ಸ್‌ಆ್ಯಪ್‌ನಲ್ಲಿ ಈಗಾಗಲೇ 300 ಮಿಲಿಯನ್ ಬಳಕೆದಾರರು ಇದ್ದಾರೆ. ವಾಟ್ಸ್‌ಆ್ಯಪ್ ಒಂದು ವರ್ಷದ ನಂತರ .99 ಡಾಲರ್ ದರ ವಿಧಿಸುತ್ತದಾರರೂ ಈವರೆಗೆ ಹಣಕೊಟ್ಟ ಬಳಕೆದಾರರು ಎಷ್ಟು ಎಂಬುದನ್ನು ಕಂಪನಿ ಬಹಿರಂಗಪಡಿಸಿಲ್ಲ.