ವಾಟ್ಸ್ ಆ್ಯಪ್ @ಡೆಸ್ಕ್‌ಟಾಪ್! ಇಂದು ಯಾರಾದರೂ ಯುವಕರ ಕೈನಲ್ಲಿ ಸ್ಮಾರ್ಟ್‌ಫೋನಿದ್ದರೆ ವ್ಯಾಟ್ಸ್ ಆ್ಯಪ್ ಹಾಗೂ... ಇಂದು ಯಾರಾದರೂ ಯುವಕರ ಕೈನಲ್ಲಿ ಸ್ಮಾರ್ಟ್‌ಫೋನಿದ್ದರೆ ವ್ಯಾಟ್ಸ್ ಆ್ಯಪ್ ಹಾಗೂ ಮೆಸೆಂಜರ್ ಇಲ್ಲದವರನ್ನು ದುರ್ಬೀನು ಹಾಕಿಕೊಂಡು ಹುಡುಕಬೇಕಾಗುತ್ತದೆ. ಬೆರಳೆಣಿಕೆಯ ಬುದ್ಧಿಜೀವಿಗಳು ಇದರ ಸಹವಾಸದಿಂದ ದೂರವಿರಲು ಪ್ರಯತ್ನಿಸಿರಬಹುದು. ಅಥವಾ ಯಾವುದೋ ಕೆಟ್ಟ ನೆನಪುಗಳಿಗೆ ಕಾರಣವಾಗಿದ್ದರೆ ಈ ಅಪ್ಲಿಕೇಷನ್‌ನಿಂದ ದೂರವಿರಬಹುದು ಅಷ್ಟೆ. ಆದರೆ ಈ ಸಾಮಾಜಿಕ ತಾಣಗಳು ಯುವ ಪೀಳಿಗೆಯ ಅವಿಭಾಜ್ಯ ಅಂಗವಾಗುತ್ತಿದೆ. ಬೇಡವೆಂದರೂ ಅದರ ಮಾಯೆಯಿಂದ ಹೊರಬರಲು ಸಾಧ್ಯವಾಗುವುದಿಲ್ಲ. ಇಂಥ ಸಂದರ್ಭದಲ್ಲಿ ನಿಮ್ಮ ಲ್ಯಾಪ್‌ಟಾಪ್ ಅಥವಾ ಡೆಸ್ಕ್ ಟಾಪ್‌ಗಳಿಗೂ ವಾಟ್ಸ್ ಆ್ಯಪ್ ಇನ್ ಸ್ಟಾಲ್ ಮಾಡಿಕೊಳ್ಳಬಹುದು. ಇದಕ್ಕಾಗಿ ನೀವು ಈ ಕೆಳಗೆ ಹೇಳಿದಂತೆ ಮಾಡಬೇಕಾಗುತ್ತದೆ. · ನಿಮ್ಮ ಲ್ಯಾಪ್‌ಟಾಪ್‌ಗಳಿಗೂ ಅಥವಾ ಡೆಸ್ಕ್ ಟಾಪ್‌ಗೆ ಬ್ಲ್ಯೂಸ್ಟಾಕ್ಸ್ ಆ್ಯಪ್ ಪ್ಲೇಯರ್ ಹಾಕಿಕೊಳ್ಳಬೇಕು, ಇದರ ಲಿಂಕ್ ಇಲ್ಲಿದೆ. (://../---2htm) · ಆಮೇಲೆ ಇದನ್ನು ಡೌನ್‌ಲೋಡ್ ಮಾಡಿಕೊಂಡು ಇನ್‌ಸ್ಟಾಲ್ ಮಾಡಿ. · ಇದೇ ಸಂದರ್ಭದಲ್ಲಿ ವಾಟ್ಸ್‌ಆ್ಯಪ್‌ನ ಎಪಿಕೆ ಫೈಲ್ ಡೌನ್‌ಲೋಡ್ ಮಾಡಿಕೊಳ್ಳಿ. ಇದರ ಲಿಂಕ್ ಇಲ್ಲಿದೆ. (://..///.) · ಬ್ಲ್ಯೂಸ್ಟಾಕ್ಸ್ ಇನ್‌ಸ್ಟಾಲ್ ಆದ ಬಳಿಕ ವಾಟ್ಸ್ ಆ್ಯಪ್ ಫೈಲ್ ಓಪನ್ ಮಾಡಿ. · ನಿಮ್ಮ ಫೋನ್ ಸಂಖ್ಯೆ ಅಲ್ಲಿ ದಾಖಲಿಸಿ. ಇದಾದ ಬಳಿಕ ಎಸ್‌ಎಂಎಸ್ ವೆರಿಫಿಕೇಶನ್ ಕೇಳುತ್ತದೆ. ಆದರೆ ಕಂಪ್ಯೂಟರ್‌ನಲ್ಲಿ ಎಸ್‌ಎಂಎಸ್ ವೆರಿಫಿಕೇಷನ್ ಆಗುವುದಿಲ್ಲ. ಈ ಹಿನ್ನೆಲೆಯಲ್ಲಿ 5 ನಿಮಿಷ ಕಾಯಬೇಕು. · ಇದಾದ ನಂತರ 'ಕಾಲ್ ಮಿ' ಎಂಬ ಆಪ್ಶನ್ ಆಯ್ಕೆ ಮಾಡಿ, ವಾಟ್ಸ್ ಆ್ಯಪ್ ಸೇವಾ ಕೇಂದ್ರದಿಂದ ಕರೆ ಬರುತ್ತದೆ. · ಆಗ ಅವರು ಹೇಳುವ 6 ಅಂಕಿಗಳನ್ನು ದಾಖಲಿಸಿ ಖಾತ್ರಿ ಮಾಡಿಕೊಳ್ಳಿ. · ಆ ನಂತರ ನಿಮಗೆ ಎಲ್ಲ ವಾಟ್ಸ್ ಆ್ಯಪ್‌ಚಾಟ್‌ಗಳು ಇಲ್ಲಿ ದೊರೆಯುತ್ತವೆ. · ಇಲ್ಲಿ ಒಂದು ದುರಂತವಿದೆ, ನೀವು ಒಂದು ವಾಟ್ಸ್‌ಆ್ಯಪ್ ಅಕೌಂಟ್ ಅನ್ನು ಎರಡು ಡಿವೈಸ್‌ನಲ್ಲಿ ಬಳಸಲು ಸಾಧ್ಯವಿಲ್ಲ. · ಆದ್ದರಿಂದ ಬೇರೊಂದು ಮೊಬೈಲ್ ಸಂಖ್ಯೆಯನ್ನು ಇಲ್ಲಿ ಹಾಕುವುದು ಒಳಿತು. · ನಿಮ್ಮ ಮೊಬೈಲ್‌ನಲ್ಲಿನ ಕಾಂಟ್ಯಾಕ್ಟ್‌ಗಳು ಸಿಗುವುದಿಲ್ಲ. ಇದಕ್ಕಾಗಿ ಡಾಟಾ ಬೇಸ್ ಬಳಸಬಹುದು. · ಕಚೇರಿ ಬಳಕೆಗೆ ಇದು ಹೇಳಿ ಮಾಡಿಸಿದಂತಿದೆ. · ಈ ಅಪ್ಲಿಕೇಷನ್ ಎಲ್ಲ ವಿಂಡೋಸ್ ವಿಸ್ತಾ ಹಾಗೂ 8 ನಂತರದ ಆಪರೇಟಿಂಗ್ ಸಿಸ್ಟಮ್‌ನಲ್ಲಿ ಕೆಲಸ ಮಾಡುತ್ತದೆ. · ವಾಟ್ಸ್‌ಆ್ಯಪ್ ರೀತಿಯಲ್ಲಿ ಉಳಿದ ಚಾಟಿಂಗ್ ಆ್ಯಪ್‌ಗಳಾದ ಹೈಕ್, ವಿಚಾಟ್‌ಗೂ ಇದನ್ನು ಬಳಸಬಹುದು. ಅವುಗಳನ್ನೂ ಇದೇ ರೀತಿಯಲ್ಲಿ ಎಪಿಕೆ ಫೈಲ್‌ಗಳ ಮೂಲಕ ಬಳಸಬಹುದು.