ಮಿಟಾಪಾಜಿ ಪಾತ್ರ ಕೆಂಪುರಕ್ತ ಕಣಗಳನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ವಿಜ್ಞಾನಿಗಳು ಮಹತ್ವದ ಯಶಸ್ಸು ಗಳಿಸಿದ್ದಾರೆ. ಕೆಂಪುರಕ್ತ ಕಣಗಳು ಹೇಗೆ ಹುಟ್ಟಿಕೊಳ್ಳುತ್ತವೆ ಎನ್ನುವುದನ್ನು ಕಂಡುಕೊಂಡಿದ್ದಾರೆ. ಇದು ರಕ್ತಕ್ಕೆ ಸಂಬಂಧಿಸಿದ ಅನಿಮಿಯಾದಂಥ ರೋಗಗಳ ಕಾರಣ ಹುಡುಕಲಿಕ್ಕಷ್ಟೇ ನೆರವಾಗುವುದಿಲ್ಲ. ಬದಲಾಗಿ ಲ್ಯಾಬ್‌ನಲ್ಲೇ ರಕ್ತದ ಕೋಶಗಳನ್ನು ಉತ್ಪಾದಿಸುವ ನಿಟ್ಟಿನಲ್ಲಿ ಮಹತ್ವದ ನೆರವು ನೀಡುತ್ತದೆ. ಕೆಂಪುರಕ್ತ ಕೋಶಗಳು ಆಮ್ಲಜನಕವನ್ನು ಇಡೀ ದೇಹಕ್ಕೆ ರವಾನಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ರಕ್ತಕಣಗಳ ಉತ್ಪಾದನೆಯಲ್ಲಿ ಮಿಟಾಪಾಜಿಯ ಪಾತ್ರವನ್ನು ಸರಿಯಾಗಿ ಅರ್ಥಮಾಡಿಕೊಂಡಿರಲಿಲ್ಲ. ಈಗ ಮಿಟಾಪಾಜಿಯ ಪಾತ್ರ ಒಂದೊಂದೇ ಅರ್ಥವಾಗುತ್ತಿದೆ.