ನಮ್ಮದು ಕಳಪೆ ಅಂತರ್ಜಾಲ! ಮಾಹಿತಿ ತಂತ್ರಜ್ಞಾನದಲ್ಲಿ ಜಗದೇಕ ವೀರರು ಎಂದೆಲ್ಲ ಕೊಚ್ಚಿಕೊಳ್ಳುವ ಭಾರತ ಅಂತರ್ಜಾಲ ವೇಗದ ಟಾಪ್-10 ಕಳಪೆ ಪಟ್ಟಿಯಲ್ಲಿ.. ಮಾಹಿತಿ ತಂತ್ರಜ್ಞಾನದಲ್ಲಿ ಜಗದೇಕ ವೀರರು ಎಂದೆಲ್ಲ ಕೊಚ್ಚಿಕೊಳ್ಳುವ ಭಾರತ ಅಂತರ್ಜಾಲ ವೇಗದ ಟಾಪ್-10 ಕಳಪೆ ಪಟ್ಟಿಯಲ್ಲಿ ಹೆಸರು ಗಳಿಸಿದೆ. ಭಾರತದೊಟ್ಟಿಗೆ ಕಳಪೆ ಅಂತರ್ಜಾಲ ಸಂಪರ್ಕ ಹೊಂದಿರುವ ದೇಶಗಳೆಂದರೆ ಸಿರಿಯಾ, ಬೊಲೋವಿಯಾದಂಥ ಹಿಂದುಳಿದ ದೇಶಗಳು. ಭಾರತದಲ್ಲಿ ಸುಮಾರು 12.10 ಕೋಟಿ ಜನ ಅಂತರ್ಜಾಲ ಬಳಸುತ್ತಿದ್ದರೆ, ಇವರಲ್ಲಿ ಹೆಚ್ಚಿನವರು 256 ಕೆಬಿಪಿಎಸ್‌ಗಿಂತ ಕಡಿಮೆ ವೇಗದಲ್ಲಿ ಬಳಸುತ್ತಿದ್ದಾರೆ. ಜನಸಂಖ್ಯೆಯ ಶೇ.9ರಷ್ಟು ಜನ ಮಾತ್ರ ಅಂತರ್ಜಾಲ ಉಪಯೋಗಿಸಿದರೆ, ಕೇವಲ ಶೇ.1ರಷ್ಟು ಜನರು ಬ್ರಾಡ್‌ಬ್ಯಾಂಡ್ ಬಳಕೆ ಮಾಡುತ್ತಿದ್ದಾರೆ ಎಂದು ಜಾಗತಿಕ ಅಂತರ್ಜಾಲ ಸೇವೆಗಳ ಒಕ್ಕೂಟದ ವರದಿ ತಿಳಿಸಿದೆ. ಅಂದಹಾಗೆ ಅಂತರ್ಜಾಲ ವೇಗವನ್ನು ಹೆಚ್ಚಿಸುವ ಸಲುವಾಗಿ ಕೇಂದ್ರ ಸರ್ಕಾರದ ಅಧೀನದಲ್ಲಿರುವ ಟ್ರಾಯ್ ಕ್ಷಿಪ್ರ ಕ್ರಮಕ್ಕೆ ಮುದಾಗಿದೆ. ಭಾರತದಲ್ಲಿ 3ಜಿ ಹಾಗೂ 2ಜಿ ಸೇವೆ ನೀಡುತ್ತಿರುವ ನೆಟ್‌ವರ್ಕ್‌ಗಳಿಗೆ ವೇಗ ಮಿತಿ ನಿಗದಿ ಮಾಡಲು ನಿರ್ಧರಿಸಿದೆ. 3ಜಿಗೆ ಕಡ್ಡಾಯವಾಗಿ 1 ಎಂಬಿಪಿಎಸ್ ಹಾಗೂ 2ಜಿಗೆ 56 ಕೆಬಿಪಿಎಸ್ ವೇಗವನ್ನು ನೀಡಲೇಬೇಕು ಎಂದು ಷರತ್ತು ವಿಧಿಸಲು ಟ್ರಾಯ್ ನಿರ್ಧರಿಸಿದೆ. ಮೊಬೈಲ್ ನೆಟ್‌ವರ್ಕ್ ನೀಡುತ್ತಿರುವ ಸೇವೆಗಳ ಬಗ್ಗೆ ಸರಣಿ ದೂರುಗಳು ಬರುತ್ತಿರುವ ಹಿನ್ನೆಲೆಯಲ್ಲಿ ಈ ಕ್ರಮ ತೆಗೆದುಕೊಳ್ಳಲಾಗುತ್ತಿದೆ