ಪೀರಿಯಾಡಿಕ್ ಟೇಬಲ್ ಜನಕನ ಜನ್ಮಾಚರಣೆಗೆ ಡೂಡಲ್ ಬಿಡಿಸಿದ ಗೂಗಲ್ ರಷ್ಯಾದ ರಸಾಯನಶಾಸ್ತ್ರಜ್ಞ ಡಿಮಿಟ್ರಿ ಮೆಂಡೆಲೀವ್ ಅವರ ೧೮೨ ನೆ ವರ್ಷದ ಜನ್ಮಾಚರಣೆಯ ಸಂದರ್ಭದಲ್ಲಿ ಡೂಡಲ್ ಬಿಡಿಸುವ ಮೂಲಕ ಅಂತರ್ಜಾಲ ಸರ್ಚ್ ದೈತ್ಯ ಗೂಗಲ್ ನವದೆಹಲಿ: ರಷ್ಯಾದ ರಸಾಯನಶಾಸ್ತ್ರಜ್ಞ ಡಿಮಿಟ್ರಿ ಮೆಂಡೆಲೀವ್ ಅವರ ೧೮೨ ನೆ ವರ್ಷದ ಜನ್ಮಾಚರಣೆಯ ಸಂದರ್ಭದಲ್ಲಿ ಡೂಡಲ್ ಬಿಡಿಸುವ ಮೂಲಕ ಅಂತರ್ಜಾಲ ಸರ್ಚ್ ದೈತ್ಯ ಗೂಗಲ್ ಸಂಸ್ಥೆ ಗೌರವ ಸಲ್ಲಿಸಿದೆ. ೧೮೩೪ ಫೆಬ್ರವರಿ ೮ ರಂದು ಜನಿಸಿದ ಮೆಂಡಲೀವ್ ಆವರ್ತಕ ಕೋಷ್ಟಕದ ಜನಕ ಎಂದೇ ಪ್ರಖ್ಯಾತ. ೧೮೬೯ ರಲ್ಲಿ ಮೊದಲ ಬಾರಿಗೆ ಪ್ರಕಟವಾಗಿದ್ದ ಪೀರಿಯಾಡಿಕ್ ಟೇಬಲ್ ನಲ್ಲಿ ಆಗ್ಗೆ ಸಂಶೋಧನೆಯಾಗಿದ್ದ ೬೩ ಆವರ್ತಕ ಕೋಷ್ಟಕ ಅಂಶಗಳನ್ನು ನಮೂದಿಸಲಾಗಿತ್ತು. ಅಲ್ಲದೆ ಇನ್ನೂ ಸಂಶೋಧನೆಯಾಗಬೇಕಿದ್ದ ೮ ಅಂಶಗಳ ಬಗ್ಗೆಯೂ ಮೆಂಡೆಲೀವ್ ಊಹೆ ಮಾಡಿದ್ದರು. ನಂತರದ ವರ್ಷಗಳಲ್ಲಿ ಈ ಕೋಷ್ಟಕದ ನಮೂದನೆಯಲ್ಲಿ ಹೆಚ್ಚಿನ ಸಂಶೋಧನೆಗಳಾದಂತೆ ಬದಲಾವಣೆಗಳಾಗಿದ್ದು, ಇದೇ ವರ್ಷದ ಜನವರಿಯಲ್ಲಿ ಈ ಕೋಷ್ಟಕದ ಏಳನೇ ಸಾಲನ್ನು ಸಂಪೂರ್ಣಗೊಳಿಸಲಾಗಿತ್ತು.