ಇನ್ನಷ್ಟು ದೊಡ್ಡದು ಮೈಕ್ರೋಸಾಫ್ಟ್ ಡಿವೈಸಸ್ ತನ್ನ ಬಹುನಿರೀಕ್ಷಿತ ಆಂಡ್ರಾಯ್ಡ್ ಚಾಲಿತ ನೋಕಿಯಾ ಎಕ್ಸ್‌ಎಲ್ ಸ್ಮಾರ್ಟ್‌ಫೋನ್ ಭಾರತೀಯ ಮಾರುಕಟ್ಟೆಗೆ ಪರಿಚಯಿಸಿದೆ. ಭಾರತೀಯ ಮಾರುಕಟ್ಟೆಯಲ್ಲಿ ನೋಕಿಯಾ ಎಕ್ಸ್ ಸರಣಿಯ ಸ್ಮಾರ್ಟ್ ಫೋನ್‌ಗಳು ಈಗಾಗಲೇ ಲಭ್ಯವಿದ್ದು, ಇದರ ಬೆನ್ನಲ್ಲೇ ನೋಕಿಯಾ ಎಕ್ಸ್‌ಎಲ್ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಲಾಗಿದೆ. ಅತ್ಯಂತ ವೈಶಿಷ್ಯ್ಟಗಳಿಂದ ಕೂಡಿರುವ ನೋಕಿಯಾ ಎಕ್ಸ್‌ಎಲ್ ಸ್ಮಾರ್ಟ್‌ಫೋನ್ ನೋಕಿಯಾ ವಿಶೇಷತೆಗಳ ಜತೆ ಮೈಕ್ರೋಸಾಫ್ಟ್ ಸೇವೆಗಳನ್ನು ಒದಗಿಸಲಾಗುವುದು ಎಂದು ನೋಕಿಯಾ ಮಾರುಕಟ್ಟೆ ಮುಖ್ಯಸ್ಥ ವಿರಳ್ ಓಜಾ ತಿಳಿಸಿದರು. ಗ್ರಾಹಕರ ನಿರೀಕ್ಷೆಯಂತೆ 5 ಇಂಚಿನ ಹಿರಿದಾದ ಪರದೆ ಉತ್ತಮ ಅನುಭವ ನೀಡಲಿದೆ. ಉತ್ತಮ ಸಾಮರ್ಥ್ಯದ ಬ್ಯಾಟರಿ ಅಳವಡಿಸಲಾಗಿದ್ದು 16 ಗಂಟೆಗಳ ಟಾಕ್ ಟೈಮ್ ಮತ್ತು 41 ದಿನಗಳ ಸ್ಟ್ಯಾಂಡ್ ಬೈ ನೀಡುತ್ತದೆ. ಮೈಕ್ರೋಸಾಫ್ಟ್ ಡಿವೈಸಸ್‌ನ ನೋಕಿಯಾ ಎಕ್ಸ್‌ಎಲ್ ಸ್ಮಾರ್ಟ್‌ಫೋನ್ ಏರ್‌ಟೆಲ್ ನೆಟ್ ವರ್ಕ್‌ನೊಂದಿಗೆ ಕೈ ಜೋಡಿಸಿದ್ದು ಗ್ರಾಹಕರಿಗೆ ಉತ್ತಮ ಕೊಡುಗೆ ಲಭ್ಯವಾಗುವಂತೆ ಮಾಡಲಾಗಿದೆ. ಆರು ತಿಂಗಳ ಕಾಲ ಅನಿಮಿಯತ ಅಪ್ಲಿಕೇಶನ್ ಡೌನ್‌ಲೋಡ್ ಕೊಡುಗೆ ನೀಡಲಾಗಿದೆ. ಗ್ರಾಹಕರಿಗೆ ಕೈಗೆಟುಕುವ ದರದಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದು ಇದರ ವೆಚ್ಚ ರು. 11,489. ನೋಕಿಯಾ ಎಕ್ಸ್ ಪ್ಲಸ್ ಸ್ಮಾರ್ಟ್‌ಫೋನ್ ಕೂಡ ಮಾರುಕಟ್ಟೆಗೆ ಪರಿಚಯಿಸಿದ್ದು, ವೇಗದ ಮಲ್ಟಿಟಾಸ್ಕಿಂಗ್ ವೈಶಿಷ್ಟ್ಯಗಳೊಂದಿಗೆ ರು. 8399 ದರದಲ್ಲಿ ಲಭ್ಯವಿದೆ.