ವೈಬ್ ಎಮೋಶನ್ ಸೆನ್ಸಾರ್ ಫಿಲಿಪ್ಸ್ ಕಂಪನಿ ತಯಾರಿಸುತ್ತಿರುವ ಈ ನೆಕಲೇಸ್ ರೂಪದ ಸೆನ್ಸಾರ್, ತೊಟ್ಟವರ ಬಯೋಮೆಟ್ರಿಕ್ ಸಿಗ್ನಲ್ ಗಳನ್ನು ಸಂಗ್ರಹಿಸಿ ಬೇರೆ ಡಿವೈಸ್ ಗಳಿಗೂ... ಫಿಲಿಪ್ಸ್ ಕಂಪನಿ ತಯಾರಿಸುತ್ತಿರುವ ಈ ನೆಕಲೇಸ್ ರೂಪದ ಸೆನ್ಸಾರ್, ತೊಟ್ಟವರ ಬಯೋಮೆಟ್ರಿಕ್ ಸಿಗ್ನಲ್ ಗಳನ್ನು ಸಂಗ್ರಹಿಸಿ ಬೇರೆ ಡಿವೈಸ್ ಗಳಿಗೂ, ಇದೇ ನೆಕ್ ಲೇಸ್ ತೊಟ್ಟ ಬೇರೆಯವರಿಗೂ ಮಾಹಿತಿ ನೀಡುತ್ತದೆ. ಇದು ಭಾವನೆಗಳಿಗೆ ಸಂಬಂಧಿಸಿದ ಅಪ್ಲಿಕೇಶನ್ ಗಳನ್ನು ಹೊಂದಿದ್ದು, ಮನಸ್ಸಿನ ಮಾತುಗಳನ್ನು ಕೇಳುವುದಲ್ಲದೆ, ಒತ್ತಡ ನಿಯಂತ್ರಕವನ್ನು ಹೊಂದಿದ್ದು ನಮ್ಮ ಮಾನಸಿಕ ಜಗತ್ತಿನ ಬಾಗಿಲನ್ನು ತೆರೆಯುತ್ತದೆ. ಹೀಗಾಗಿ ನಮ್ಮ ಮನಸ್ಸನ್ನೂ, ಇನ್ನೊಬ್ಬರ ಮನಸ್ಸಿನ ಭಾವನೆಗಳನ್ನೂ ಅರಿಯಲು ಸಹಾಯಕವಾಗಿದೆ. ಇದರಿಂದ ಮನುಷ್ಯ ಮನುಷ್ಯನ ನಡುವಿನ ಸಂಬಂಧ ಸುಧಾರಿಸಬಹುದೇ? ಇದೊಂದು ಸೆನ್ಸಿಟಿವ್ ತಂತ್ರತ್ರಾನವನ್ನೊಳಗೊಂಡ ಆಭರಣ. ಆದರೆ ಈ ತಂತ್ರಜ್ಞಾನ ಕಾರ್ಯರೂಪಕ್ಕೆ ಬರಲು ಇನ್ನೂ ಐದು ವರ್ಷಗಳು ಕಾಯಬೇಕಾಗಬಹುದು.