ಡಿಜಿಟಲ್ "ಇ-ಸ್ಲೇಟ್' ಶಾಲೆಗಳಲ್ಲಿ ಮಕ್ಕಳಿಗೆ ಪಠ್ಯಗಳನ್ನು ಸುಲಭವಾಗಿ ಬೋಧಿಸಲು ಅನುಕೂಲವಾಗುವಂತೆ ಟೆಲಿ ವಿತಲ್ ಇಂಡಿಯಾ ಕಂಪನಿ, ಮೇಘಾ ಆಧಾರಿತ ಡಿಜಿಟಲ್... ಬೆಂಗಳೂರು: ಶಾಲೆಗಳಲ್ಲಿ ಮಕ್ಕಳಿಗೆ ಪಠ್ಯಗಳನ್ನು ಸುಲಭವಾಗಿ ಬೋಧಿಸಲು ಅನುಕೂಲವಾಗುವಂತೆ ಟೆಲಿ ವಿತಲ್ ಇಂಡಿಯಾ ಕಂಪನಿ, ಮೇಘಾ ಆಧಾರಿತ ಡಿಜಿಟಲ್ ಕಲಿಕೆಯ ಇ-ಸ್ಲೇಟ್ ತಂತ್ರಜ್ಞಾನ ಪರಿಚಯಿಸಿದೆ. ಈಗಾಗಲೇ ರಾಜ್ಯದ 10 ಸರ್ಕಾರಿ ಶಾಲೆಗಳಿಗೆ ಪ್ರಾಯೋಗಿಕವಾಗಿ ತನ್ನ ಉತ್ಪನ್ನಗಳನ್ನು ನೀಡಿದೆ. ಮಕ್ಕಳಿಗೆ ಎಲ್ಲ ವಿಷಯಗಳ ಪಠ್ಯಗಳನ್ನು ಸುಲಭವಾಗಿ ಅರ್ಥ ಮಾಡಿಸಲು ಈ ತಂತ್ರಜ್ಞಾನ ಅನುಕೂಲಕರವಾಗಿದೆ. ಇ-ಸ್ಲೇಟ್ ಟಿವಿ ಪರದೆಯಲ್ಲಿ ಚಿತ್ತಾರ ಮೂಡಿಬರಲಿದೆ. ಬೋಧನೆ ಸಂದರ್ಭದಲ್ಲಿ ಪ್ರಾಯೋಗಿಕವಾಗಿ ತೋರಿಸಲು ಇದು ಹೆಚ್ಚು ಅನುಕೂಲಕರವಾಗಿದೆ ಎಂದು ಸಂಸ್ಥೆಯ ಮುಖ್ಯಸ್ಥ ಬಿ.ವಿ ಜಗದೀಶ್ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ಶಿಫಾರಸಿನ ಮೇರೆಗೆ ರಾಜ್ಯ ಸರ್ಕಾರದ ಅನುಮತಿ ಪಡೆದು ಈಗಾಗಲೇ ಮಧುಗಿರಿ, ಗುರುಮಿಠಕಲ್, ಹಾರೋಹಳ್ಳಿ, ಚನ್ನಪಟ್ಟಣ, ಮಾಗಡಿ ತಾಲೂಕಿನ ಕುದೂರು, ಅಥಣಿ ತಾಲೂಕಿನ ಕೊಕತನೂರು, ರಾಯಚೂರು ಜಿಲ್ಲೆಯ ಗುಂಜೂರು, ಕುಷ್ಟಗಿ ತಾಲೂಕಿನ ಗುಡ್ಡದಾರ ಸರ್ಕಾರಿ ಶಾಲೆಗಳಿಗೆ ಇ-ಸ್ಲೇಟ್ ಟಿವಿ ವಿತರಿಸಲಾಗಿದೆ ಎಂದು ವಿವರಿಸಿದರು. ಸರ್ಕಾರ ಅನುಮತಿ ನೀಡಿದರೆ ಇನ್ನೂ ಹೆಚ್ಚಿನ ಶಾಲೆಗಳಿಗೆ ವಿತರಿಸಲಾಗುವುದು ಎಂದು ತಿಳಿಸಿದರು. ಸಂಸ್ಥೆಯ ಮುಖ್ಯಸ್ಥರಾದ ಕುಮಾರ್, ನಿರ್ದೇಶಕ ಮಹೇಶ್ ಹಾಜರಿದ್ದರು.