ಶೀಘ್ರದಲ್ಲೇ `ಡಿಜಿಟಲ್ ಲಾಕರ್'ನಲ್ಲಿ ದಾಖಲೆ ಭದ್ರ ಇನ್ನು ಮುಂದೆ ಪ್ರಮುಖ ದಾಖಲೆ ಪತ್ರ ಕಳೆದುಕೊಳ್ಳುವ ಭೀತಿ ನಿಮಗಿರುವುದಿಲ್ಲ. ಏಕೆಂದರೆ, ನಿಮ್ಮ ದಾಖಲೆಗಳೆಲ್ಲ `ಡಿಜಿಟಲ್ ಲಾಕರ್'ನಲ್ಲಿ ಭದ್ರವಾಗಿರಲಿದೆ... ನವದೆಹಲಿ: ಇನ್ನು ಮುಂದೆ ಪ್ರಮುಖ ದಾಖಲೆ ಪತ್ರ ಕಳೆದುಕೊಳ್ಳುವ ಭೀತಿ ನಿಮಗಿರುವುದಿಲ್ಲ. ಏಕೆಂದರೆ, ನಿಮ್ಮ ದಾಖಲೆಗಳೆಲ್ಲ `ಡಿಜಿಟಲ್ ಲಾಕರ್'ನಲ್ಲಿ ಭದ್ರವಾಗಿರಲಿದೆ. ಕಾಗದರಹಿತ ಆಡಳಿತದತ್ತ ಭಾರತವು ಹೆಜ್ಜೆಯಿಟ್ಟಿದ್ದು, ಶೀಘ್ರದಲ್ಲಿಯೇ ನೀವು ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ `ಡಿಜಿಟಲ್ ಲಾಕರ್' ಸೌಲಭ್ಯ ಪಡೆಯಬಹುದಾಗಿದೆ. `ಡಿಜಿಟಲ್ ಭಾರತ'ದ ಅಂಗವಾಗಿರುವ ಡಿಜಿಟಲ್ ಲಾಕರ್ ಸೌಲಭ್ಯಕ್ಕೆ ಜುಲೈ 1ರಂದು ಪ್ರಧಾನಿ ನರೇಂದ್ರ ಮೋದಿ ಅವರು ಚಾಲನೆ ನೀಡಲಿದ್ದಾರೆ. ಈ ಸೌಲಭ್ಯ ಜಾರಿಯಾದರೆ, ನಾಗರಿಕರು ತಮ್ಮೆಲ್ಲ ದಾಖಲೆಗಳನ್ನು ಡಿಜಿಟಲ್ ಲಾಕರ್ ನಲ್ಲಿ ಸಂರಕ್ಷಿಸಿಡಬಹುದಾಗಿದೆ. ದಾಖಲೆಗಳನ್ನು ಡಿಜಿಟಲ್ ಲಾಕರ್‍ನಲ್ಲಿ ರಕ್ಷಿಸಿಡಬಹುದಾಗಿದೆ. ಏನಿದು ಡಿಜಿಟಲ್ ಲಾಕರ್? ಪ್ರಮುಖ ದಾಖಲೆಗಳ ಡಿಜಿಟಲ್ ಪ್ರತಿಗಳನ್ನು ಆನ್‍ಲೈನ್‍ನಲ್ಲಿ ಸಂರಕ್ಷಿಸಿಡುವ ಸೌಲಭ್ಯವಿದು. ಡಿಜಿಟಲ್ ಲಾಕರ್‍ನಲ್ಲಿ ಒಮ್ಮೆ ನೋಂದಣಿ ಮಾಡಿಕೊಂಡರೆ, ನಾಗರಿಕರು ತಮ್ಮ ಪ್ಯಾನ್ ಕಾರ್ಡ್, ಪಾಸ್‍ಪೋರ್ಟ್, ಅಂಕಪಟ್ಟಿ ಮತ್ತಿತರ ಮಹತ್ವದ ದಾಖಲೆಗಳನ್ನು ಅದರಲ್ಲಿಟ್ಟುಕೊಳ್ಳಬಹುದು. ಆದರೆ, ಇದಕ್ಕೆ ಆಧಾರ್ ಸಂಖ್ಯೆ ಹಾಗೂ ಆಧಾರ್ ಲಿಂಕ್ ಹೊಂದಿರುವ ಮೊಬೈಲ್ ಸಂಖ್ಯೆ ಬೇಕು. ನೋಂದಣಿ ಎಲ್ಲಿ?