ಡಿಜಿಟಲ್ ಇಂಡಿಯಾ ಅಭಿಯಾನಕ್ಕೆ ಹ್ಯಾಕರ್ ಅಂಕಿತ್ ಫಾಡಿಯಾ ಪ್ರಚಾರ ರಾಯಭಾರಿ ನೈತಿಕ ಹ್ಯಾಕರ್ ಮತ್ತು ಹಲವು ಪುಸ್ತಕಗಳ ಬರಹಗಾರ ಅಂಕಿತ್ ಫಾಡಿಯಾ ಅವರನ್ನು 'ಡಿಜಿಟಲ್ ಇಂಡಿಯ' ಅಭಿಯಾನಕ್ಕೆ ಪ್ರಚಾರ ರಾಯಭಾರಿಯಾಗಿ ನೇಮಿಸಲಾಗಿದೆ ನವದೆಹಲಿ: ನೈತಿಕ ಹ್ಯಾಕರ್ ಮತ್ತು ಹಲವು ಪುಸ್ತಕಗಳ ಬರಹಗಾರ ಅಂಕಿತ್ ಫಾಡಿಯಾ ಅವರನ್ನು 'ಡಿಜಿಟಲ್ ಇಂಡಿಯ' ಅಭಿಯಾನಕ್ಕೆ ಪ್ರಚಾರ ರಾಯಭಾರಿಯಾಗಿ ನೇಮಿಸಲಾಗಿದೆ ಎಂದು ತಿಳಿದುಬಂದಿದೆ. ತಮ್ಮ ಫೇಸ್ಬುಕ್ ಪುಟದಲ್ಲಿ ಈ ಘೋಷಣೆಯನ್ನು ಮಾಡಿಕೊಂಡಿರುವ ೩೦ ವರ್ಷದ ಫಾಡಿಯಾ, ಕೇಂದ್ರ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ನೀಡಿರುವ ಪ್ರಮಾಣ ಪತ್ರದ ಫೋಟೋವನ್ನು ಕೂಡ ಹಾಕಿಕೊಂಡಿದ್ದಾರೆ. "ನರೇಂದ್ರ ಮೋದಿ ಅವರ ಡಿಜಿಟಲ್ ಇಂಡಿಯಾ ಅಭಿಯಾನಕ್ಕೆ ನನ್ನನ್ನು ರಾಯಭಾರಿಯಾಗಿ ನೇಮಕ ಮಾಡಿರುವುದಕ್ಕೆ ನನಗ ಗೌರವ ತಂದಂತಿದೆ ಹಾಗೂ ಇದರಿಂದ ವಿನೀತನಾಗಿದ್ದೇನೆ" ಎಂದು ಅವರು ಬರೆದುಕೊಂಡಿದ್ದಾರೆ. ಇವರ ಹ್ಯಾಕಿಂಗ್ ತಂತ್ರಜ್ಞಾನವನ್ನು ಹಲವಾರು ತಜ್ಞರು ಟೀಕಿಸಿರುವ ಹಿನ್ನಲೆಯಲ್ಲಿ ಈ ನೇಮಕ ಕುತೂಹಲ ಕೆರಳಿಸಿದೆ.