ಹಂತಕನ ಮನಸ್ಸು ಈ ಕೊಲೆಗಡುಕರು ನಿಜವಾಗಿಯೂ ಮನುಷ್ಯರಾ? ಹೌದೆನ್ನುವುದು ಭಾರಿ ಕಷ್ಟದ ಸಂಗತಿ ಬಿಡಿ. ಏಕೆಂದರೆ, ಇನ್ನೊಬ್ಬರ ಜೀವವನ್ನು ತೆಗೆಯುವವ ಎಂದಿಗೂ ಮನುಷ್ಯನಾಗಲಾರ ಎಂಬುದನ್ನು ಹಿರಿಯರೇ ಹೇಳಿಲ್ಲವೇ? ಅದೂ ಸರಿಯೇ. ಆದರೆ, ಕೊಲೆಗಡುಕರ ಬಗ್ಗೆ ಸೈನ್ಸ್ ಏನು ಹೇಳುತ್ತೆ ಗೊತ್ತಾ? > ಹಂತಕರ ಬಗ್ಗೆಯೇ ವಿಶ್ವದಲ್ಲಿ ನಾನಾ ಸಂಶೋಧನೆಗಳಾಗಿವೆ. ಕೊಲೆ ಮಾಡುವವರ ಮನಸನ್ನು ಸೂಕ್ಷ್ಮವಾಗಿ ಅಧ್ಯಯನ ಮಾಡಲಾಗಿದೆ. ಯಾವ ಸಂದರ್ಭದಲ್ಲಿ ಅವರು ಕೊಲೆ ಮಾಡುತ್ತಾರೆ? ಅವರು ಸರಣಿ ಕೊಲೆಗಡುಕರಾಗಿದ್ದರೆ, ಅವರ ಮನಸ್ಸು ಹೇಗೆ ಇರುತ್ತೆ ಎಂಬ ಬಗ್ಗೆಯೂ ಅಧ್ಯಯನ ನಡೆದಿದೆ. ಆ ಅಧ್ಯಯನದ ಚುಟುಕು ವ್ಯಾಖ್ಯಾನ ಇಲ್ಲಿದೆ... ಕೊಲೆ ಹಿಂದೆ ಸಾಮಾನ್ಯವಾಗಿ ಕೊಲೆಗಡುಕರು ತೀರಾ ಒತ್ತಡದಲ್ಲಿದ್ದಾಗ ಕೊಲೆ ಮಾಡುತ್ತಾರಂತೆ. ಆದರೆ, ಕೊಲೆ ನಂತರ ಅವರು ಮನಸ್ಸು ತಾತ್ಕಾಲಿಕವಾಗಿ ನಿರಾಳವಾಗುತ್ತದೆ ಎಂದು ಸಂಶೋಧನೆ ಹೇಳುತ್ತದೆ. ಕೊಲೆಗೆ ಕಾರಣ