ಹಾಗಲಕಾಯಿ ಟೊಮೆಟೊ ಪಲ್ಯ- ರುಚಿಕರವಾದ ಹಾಗಲಕಾಯಿ ಟೊಮೆಟೊ ಪಲ್ಯ ಮಾಡುವ ವಿಧಾನ... ಬೇಕಾಗುವ ಪದಾರ್ಥಗಳು...ಹಾಗಲಕಾಯಿ-1ಟೊಮೆಟೊ-1ಈರುಳ್ಳಿ-1ಹಸಿ ಮೆಣಸಿನಕಾಯಿ-4ಕಾಯಿ ತುರಿ-ಸ್ವಲ್ಪಬೆಲ್ಲ-ಸ್ವಲ್ಪಕೊತ್ತೊಂಬರಿ ಸೊಪ್ಪು- ಸ್ವಲ್ಪಕಡಲೆಬೇಳೆ- ಸ್ವಲ್ಪಉದ್ದಿನಬೇಳೆ- ಸ್ವಲ್ಪಸಾಸಿವೆ- ಸ್ವಲ್ಪಕರಿಬೇವು- ಸ್ವಲ್ಪಅರಿಶಿಣ- ಸ್ವಲ್ಪಹಿಂಗು-ಚಿಟಿಕೆಎಣ್ಣೆ-ಸ್ವಲ್ಪವಿಧಾನ ವಿಧಾನ...ಹಾಗಲಕಾಯಿ, ಟೊಮೆಟೊ, ಈರುಳ್ಳಿಯನ್ನು ಸಣ್ಣಗೆ ಹೆಚ್ಚಿಕೊಳ್ಳಬೇಕು.ಒಂದು ಬಾಣಲೆಗೆ ಎಣ್ಣೆ ಹಾಕಿ ಕಡಲೆಬೇಳೆ, ಉದ್ದಿನಬೇಳೆ, ಸಾಸಿವೆ, ಕರಿಬೇವು, ಅರಿಶಿಣ, ಹಿಂಗು, ಹಸಿ ಮೆಣಸಿನ ಹಾಕಿ ಒಗ್ಗರಣೆ ಮಾಡಿ ಅದಕ್ಕೆ ಹೆಚ್ಚಿದ ಹಾಗಲಕಾಯಿ ಹಾಕಿ 2 ನಿಮಿಷ ಹುರಿದುಕೊಳ್ಳಿ.ನಂತರ ಟೊಮೆಟೊ, ಈರುಳ್ಳಿ, ಉಪ್ಪು, ಬೆಲ್ಲ ಹಾಕಿ ಹುರಿಯಬೇಕು.ಕೊನೆಯಲ್ಲಿ ಕೊತ್ತೊಂಬರಿ ಸೊಪ್ಪಿನಿಂದ ಅಲಂಕರಿಸಿದರೆ ರುಚಿಕರವಾದ ಹಾಗಲಕಾಯಿ ಟೊಮೆಟೊ ಪಲ್ಯ ಸವಿಯಲು ಸಿದ್ಧ.