ಚಿಕನ್‌ ಪೆಪ್ಪರ್‌ ಫ್ರೈ- ರುಚಿಕರವಾದ ಚಿಕನ್‌ ಪೆಪ್ಪರ್‌ ಫ್ರೈ ಮಾಡುವ ವಿಧಾನ... ಬೇಕಾಗುವ ಪದಾರ್ಥಗಳು...ಕೋಳಿಮಾಂಸ – 1/2 ಕೆಜಿಕಾಳುಮೆಣಸಿನಪುಡಿ – 1 ಚಮಚದನಿಯಾಪುಡಿ – 2 ಚಮಚಅಚ್ಚಖಾರದ ಪುಡಿ- ಅರ್ಧ ಚಮಚಈರುಳ್ಳಿ – 2ಶುಂಠಿ-ಬೆಳ್ಳುಳ್ಳಿ ಪೇಸ್ಟ್ – 1 ಚಮಚಹಸಿಮೆಣಸಿನಕಾಯಿ – 2ಕೊತ್ತಂಬರಿಸೊಪ್ಪು – ಸ್ವಲ್ಪಕರೀಬೇವು – ಸ್ವಲ್ಪಅರಿಸಿನಪುಡಿ – ಚಿಟಿಕೆಉಪ್ಪು – ರುಚಿಗೆ ತಕ್ಕಷ್ಟುಎಣ್ಣೆ- ಅಗತ್ಯಕ್ಕೆ ತಕ್ಕಷ್ಟುಚಕ್ಕೆ-ಲವಂಗ ಪುಡಿ- ಕಾಲು ಚಮಚಮಾಡುವ ವಿಧಾನ...ಕೋಳಿ ಮಾಂಸವನ್ನು ಚೆನ್ನಾಗಿ ತೊಳೆದಕೊಳ್ಳಿ. ಒಲೆಯ ಮೇಲೆ ಬಾಣಲೆ ಇಟ್ಟು ಅದಕ್ಕೆ ಸ್ವಲ್ಪ ಎಣ್ಣೆ ಹಾಕಿ. ಕಾದ ನಂತರ ಈರುಳ್ಳಿ, ಕರಿಬೇವು, ಹಸಿಮೆಣಸಿನ ಕಾಯಿ ಹಾಕಿ. ಈರುಳ್ಳಿ ಕೆಂಪಗಾಗುತ್ತಿದ್ದಂತೆಯೇ ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಹಾಕಿ.2 ನಿಮಿಷದ ಬಳಿಕ ಕೋಳಿಮಾಂಸ ಹಾಗೂ ಉಪ್ಪು ಹಾಕಿ 5 ನಿಮಿಷ ಫ್ರೈ ಮಾಡಿ, ಬಳಿಕ ಕಾಳು ಮೆಣಸಿನ ಪುಡಿ, ದನಿಯಾ ಪುಡಿ, ಅಚ್ಚ ಖಾರದ ಪುಡಿ ಹಾಗೂ ಚಕ್ಕೆ-ಲವಂಗ ಪುಡಿ ಹಾಕಿ. ಸ್ವಲ್ಪ ನೀರು ಹಾಕಿ 5 ನಿಮಿಷ ಬೇಯಲು ಬಿಡಿ. ಇದೀಗ ಕೊತ್ತಂಬರಿಸೊಪ್ಪಿನಿಂದ ಅಲಂಕರಿಸಿದರೆ ಪೆಪ್ಪರ್‌ ಚಿಕನ್ ಸವಿಯಲು ಸಿದ್ಧ.