ಚಿಗಳಿ-ತಂಬಿಟ್ಟು- ನಾಗರಪಂಚಮಿ ಸ್ಪೆಷಲ್: ಚಿಗಳಿ, ತಂಬಿಟ್ಟು ಮಾಡುವ ವಿಧಾನ... ತಂಬಿಟ್ಟುಬೇಕಾಗುವ ಪದಾರ್ಥಗಳು:ಅಕ್ಕಿ – 1 ಪಾವುಬೆಲ್ಲದ ಪುಡಿ – 2 ಬಟ್ಟಲುಕಾಯಿತುರಿ –2 ಬಟ್ಟಲುಏಲಕ್ಕಿಪುಡಿ – ಸ್ವಲ್ಬಮಾಡುವ ವಿಧಾನ...ಅಕ್ಕಿಯನ್ನು ಒಂದು ಗಂಟೆ ನೆನಸಿಟ್ಟು, ನೀರು ಬಸಿದು, ಕಾಟನ್ ಬಟ್ಟೆ ಮೇಲೆ ನೆರಳಿನಲ್ಲಿ ಒಣಗಲು ಬಿಡಿ.ಬಳಿಕ ಕುಟ್ಟಿ ಜರಡಿ ಹಿಡಿಯಿರಿ. ಆ ಸಣ್ಣ ಹಿಟ್ಟಿಗೆ, ಕಾಯಿತುರಿ, ಬೆಲ್ಲದಪುಡಿ, ಏಲಕ್ಕಿಪುಡಿ ಹಾಕಿ, ಕುಟ್ಟಿ, ಬಳಿಕ ಉಂಡೆ ಕಟ್ಟಿಡಿ. (ನೀರು ಸೇರಿಸಬೇಡಿ. ಕಾಯಿತುರಿ ಹಾಗೂ ಬೆಲ್ಲದಿಂದಲೇ ಅಂಟು ಬಂದು ಉಂಡೆ ಕಟ್ಟಬಹುದು).ಚಿಗಳಿಬೇಕಾಗುವ ಪದಾರ್ಥಗಳು...ಕರಿಎಳ್ಳು – 1 ಬಟ್ಟಲುಬೆಲ್ಲದಪುಡಿ –1/4 ಬಟ್ಟಲುಮಾಡುವ ವಿಧಾನ...ಎಳ್ಳನ್ನು ಕಮ್ಮಗೆ ಹುರಿದು, ಬೆಲ್ಲದಪುಡಿ ಸೇರಿಸಿ ಕುಟ್ಟಿ ಉಂಡೆ ಕಟ್ಟಿ. (ನಾಗಪ್ಪನಿಗೆ ನೈವೇದ್ಯಕ್ಕೆ ಮಾತ್ರ, ಹಸಿಎಳ್ಳನ್ನೇ ಕುಟ್ಟಿ, ಬೆಲ್ಲ ಸೇರಿಸಿ ಉಂಡೆ ಕಟ್ಟಿ.)