ನುಗ್ಗೆ ಸೊಪ್ಪಿನ ಬೋಂಡಾ - ರುಚಿಕರವಾದ ನುಗ್ಗೆ ಸೊಪ್ಪಿನ ಬೋಂಡಾ ಮಾಡುವ ವಿಧಾನ... ಬೇಕಾಗುವ ಪದಾರ್ಥಗಳು...ಈರುಳ್ಳಿ-1/4 ಕೆ.ಜಿಕಡಲೆ ಹಿಟ್ಟು- 1 ಬಟ್ಟಲುಹಸಿ ಮೆಣಸಿನಕಾಯಿ-10ಕೊತ್ತಂಬರಿ ಸೊಪ್ಪು- ಸ್ವಲ್ಪನುಗ್ಗೆ ಸೊಪ್ಪು- 1 ಬಟ್ಟಲುಕಾರ್ನ್‌ಪ್ಲೋರ್‌- 1 ಚಮಚಉಪ್ಪು- ರುಚಿಗೆ ತಕ್ಕಷ್ಟುಎಣ್ಣೆ-ಕರಿಯಲು ಅಗತ್ಯವಿದ್ದಷ್ಟುಮಾಡುವ ವಿಧಾನ...ಈರುಳ್ಳಿ ಕೊತ್ತಂಬರಿ ನುಗ್ಗೆಸೊಪ್ಪು ಹಸಿಮೆಣಸಿನಕಾಯಿಯನ್ನು ಸಣ್ಣಗೆ ಕತ್ತರಿಸಿಟ್ಟುಕೊಳ್ಳಿ.ಕತ್ತರಿಸಿಟ್ಟುಕೊಂಡ ಪದಾರ್ಥಗಳು ಕಡಲೆಹಿಟ್ಟು ಕಾರ್ನ್ಫ್ಲೌರ್ ಉಪ್ಪು ಮತ್ತು ಸ್ವಲ್ಪ ನೀರನ್ನು ಹಾಕಿ ಬೋಂಡಾ ಹಿಟ್ಟಿನ ಹದಕ್ಕೆ ಕಲಸಿ ಹುಂಡೆಯಾಕಾರದಲ್ಲಿ ಮಾಡಿ ಕಾದ ಎಣ್ಣೆಗೆ ಹಾಕಿ ಹದ ಉರಿಯಲ್ಲಿ ಕರಿದರೆ ರುಚಿಕರವಾದ ನುಗ್ಗೆ ಸೊಪ್ಪಿನ ಬೋಂಡಾ ಸವಿಯಲು ಸಿದ್ಧ.