ಮಸಾಲೆ ಚಟ್ನಿ ಮಸಾಲೆ ಚಟ್ನಿ ಮಾಡುವ ವಿಧಾನ... ಪದಾರ್ಥಗಳು 1 ತೆಂಗಿನಕಾಯಿ-1 2.ಬೆಳ್ಳುಳ್ಳಿ-20-25 3. ಈರುಳ್ಳಿ-2 4. ಮೆಣಸು-10 ಕಾಳು 5. ಜೀರಿಗೆ-1/2 ಚಮಚ 5. ಹಸಿ ಮೆಣಸಿನ ಕಾಯಿ-10 6. ಕೊತ್ತಂಬರಿ ಸೊಪ್ಪು- 10 ಕಡ್ಡಿ 7. ಟೊಮ್ಯಾಟೋ-1 8. ಉಪ್ಪು- 1/2 ಚಮಚ 10. ಕರಿಬೇವು-4 ಕಡ್ಡಿ ಮಾಡುವ ವಿಧಾನ 1. ತೆಂಗಿನಕಾಯಿಯನ್ನು ತುರಿದು ಇಟ್ಟುಕೊಳ್ಳಬೇಕು. 2. ಬಾಣಲೆಗೆ ಸ್ವಲ್ಪ ಕಡಲೆಕಾಯಿ ಎಣ್ಣೆ ಹಾಕಿ ಕಾಯಿತುರಿಯನ್ನು ಕೆಂಪಗೆ ಹುರಿದುಕೊಳ್ಳಬೇಕು. 3. ಹಾಗೆಯೇ ಬೆಳ್ಳುಳ್ಳಿ, ಮೆಣಸು, ಜೀರಿಗೆ, ಹಸಿ ಮೆಣಸಿನಕಾಯಿ, ಟೊಮ್ಯಾಟೋ, ಕರಿಬೇವು, ಕೊತ್ತಂಬರಿ ಸೊಪ್ಪು, ಹೆಚ್ಚಿಟ್ಟುಕೊಂಡ 1ಈರುಳ್ಳಿ ಎಲ್ಲವನ್ನು ಕೆಂಪಗೆ ಹುರಿದಿಟ್ಟುಕೊಳ್ಳಬೇಕು. 4. ಅದು ತಣ್ಣಗಾದ ಮೇಲೆ ಎಲ್ಲವನ್ನು ಮಿಕ್ಸಿ ಜಾರಿಗೆ ಹಾಕಿ ಸ್ವಲ್ಪ ಉಪ್ಪು ಹಾಕಿ ರುಬ್ಬಿಕೊಳ್ಳಬೇಕು. 5. ಮತ್ತೊಂದು ಈರುಳ್ಳಿಯನ್ನು ಸಣ್ಣಗೆ ಹೆಚ್ಚಿಕೊಂಡು ಅದನ್ನು ಬಾಣಲೆಯಲ್ಲಿ ಹಾಕಿ ಚಿನ್ನದ ಬಣ್ಣ ಬರುವವರೆಗೂ ಹುರಿದು ಕೊಂಡು ರುಬ್ಬಿದ ಚಟ್ನಿಗೆ ಮಿಕ್ಸ್ ಮಾಡಿದರೆ ಮಸಾಲೆ ಚಟ್ನಿ ರೆಡಿ. - ಮಂಜುಳ .ವಿ.ಎನ್