ಕ್ಯಾರೆಟ್ ಫ್ರೈ - ರುಚಿಕರವಾದ ಕ್ಯಾರೆಟ್ ಫ್ರೈ ಮಾಡುವ ವಿಧಾನ... ಬೇಕಾಗುವ ಪದಾರ್ಥಗಳು...ಕ್ಯಾರೆಟ್- 2ಕೊಬ್ಬರಿ ತುರಿ- 1.2 ಬಟ್ಟಲುದನಿಯಾ ಪುಡಿ- 1 ಚಮಚಗರಂ ಮಸಾಲ- ಅರ್ಧ ಚಮಚಎಣ್ಣೆ- 4 ಚಮಚಸಾಸಿವೆ- ಅರ್ಧ ಚಮಚಉದ್ದಿನ ಬೇಳೆ- ಅರ್ಧ ಚಮಚಕಡಲೆ ಬೇಳೆ- ಅರ್ಧ ಚಮಚಖಾರದಪುಡಿ- ಅರ್ಧ ಚಮಚಕರಿಬೇವು- ಸ್ವಲ್ಪ ಟಅರಿಶಿನ ಪುಡಿ- ಅರ್ಧ ಚಮಚಮಾಡುವ ವಿಧಾನ...ಮೊದಲಿಗೆ ಕ್ಯಾರೆಟ್ ತುರಿದಿಟ್ಟುಕೊಳ್ಳಿ. ನಂತರ ಸ್ಟೌ ಮೇಲೆ ಬಾಣಲೆ ಇಟ್ಟು ಎಣ್ಣೆ ಹಾಕಿಕಡಲೆ ಬೇಳೆ , ಉದ್ದಿನ ಬೇಳೆ , ಸಾಸಿವೆ ,ಹಸಿಮೆಣಸು ಕರಿಬೇವು , ಅರಿಶಿನ ಪುಡಿ ಹಾಕಿ , ಸಾಸಿವೆ ಹಾಕಿ ಕೆಂಪಗೆ ಹುರಿದುಕೊಳ್ಳಿ.ಇದೀಗ ತುರಿದ ಕ್ಯಾರೆಟ್ ಹಾಕಿ ಫ್ರೈ ಮಾಡಿ. ಈಗ ಖಾರಪುಡಿ, ದನಿಯಾ ಪುಡಿ, ಗರಂಮಸಾಲ ಪುಡಿ ಹಾಕಿ ಮಿಶ್ರಣ ಮಾಡಿ. ಕೊನೆಯಲ್ಲಿ ಕೊಬ್ಬರಿ ತುರಿ ಸೇರಿಸಿ ಚೆನ್ನಾಗಿ ಮಿಶ್ರ ಮಾಡಿ. ಇದೀಗ ರುಚಿಕರವಾದ ಕ್ಯಾರೆಟ್ ಫ್ರೈ ಸವಿಯಲು ಸಿದ್ಧ.