ಕಡಲೆ ಬೀಜದ ಚಟ್ನಿ ಪುಡಿ ಕಡಲೆ ಬೀಜದ ಚಟ್ನಿ ಪುಡಿ ಮಾಡುವ ವಿಧಾನ... ಪದಾರ್ಥಗಳು 1. ಕಡಲೆಬೀಜ- ಕಾಲು ಕೆ.ಜಿ 2. ಉಪ್ಪು- 1 ಚಮಚ 3. ಬೆಳ್ಳುಳ್ಳಿ- 20-25 ಎಸಳು 4. ಖಾರದ ಪುಡಿ- 1.1/2 ಚಮಚ ಮಾಡುವ ವಿಧಾನ ಕಡಲೆ ಬೀಜವನ್ನು ಹುರಿದು ಆರಲು ಬಿಡಿ. ಕಡಲೆ ಬೀಜದ ಹೊಟ್ಟನ್ನು ತೆಗೆದು ನಂತರ ಅದನ್ನು ಮಿಕ್ಸಿ ಜಾರ್‌ಗೆ ಹಾಕಿ ಉಪ್ಪು, ಬೆಳ್ಳುಳ್ಳಿಯ ಎಸಳುಗಳು ಹಾಗೂ ಖಾರದ ಪುಡಿ ಹಾಕಿ ರುಬ್ಬಿಕೊಳ್ಳಿ. ಇದನ್ನು ಗಾಜಿನ ಡಬ್ಬಿಗೆ ಹಾಕಿ ಇಟ್ಟರೆ ಒಂದು ತಿಂಗಳವರೆಗೂ ಹಾಳಾಗುವುದಿಲ್ಲ. - ಮಂಜುಳ .ವಿ.ಎನ್