ಕ್ರಂಚಿ ಕಾರ್ನ್ ಪಕೋಡಾ ಕ್ರಂಚಿ ಕಾರ್ನ್ ಪಕೋಡಾ ಮಾಡುವ ವಿಧಾನ... ಬೇಕಾಗುವ ಸಾಮಾಗ್ರಿಗಳು ಫ್ರೆಶ್ ಸ್ವೀಟ್ ಕಾರ್ನ್ - 1 ಕಪ್ ಹಸಿ ಮೆಣಸಿನ ಕಾಯಿ -2 - 4 ಜೀರಿಗೆ- 1 ಟೀ ಸ್ಪೂನ್ ಹೆಚ್ಚಿದ ಹಸಿ ಶುಂಠಿ - 1 ಟೇಬಲ್ ಸ್ಪೂನ್ ಕಾರ್ನ್ ಹಿಟ್ಟು -1 ಟೇಬಲ್ ಸ್ಪೂನ್ ಈರುಳ್ಳಿ -2 ಮಧ್ಯಮ ಗಾತ್ರದ್ದು (ಹೆಚ್ಚಿದ್ದು) ಅಕ್ಕಿ ಹಿಟ್ಟು- 1 ಟೇಬಲ್ ಸ್ಪೂನ್ ಅರಶಿನ -ಅರ್ಧ ಟೀ ಸ್ಪೂನ್ ಬೇಕಿಂಗ್ ಸೋಡಾ -1-2 ಚಿಟಿಕಿ ಕೊತ್ತಂಬರಿ ಸೊಪ್ಪು -ಅರ್ಧ ಕಪ್ ಓಮ ಕಾಳು -ಅರ್ಧ ಟೀ ಸ್ಪೂನ್ ಎಣ್ಣೆ ಮಾಡುವ ವಿಧಾನ: ಸ್ವೀಟ್ ಕಾರ್ನ್, ಹಸಿ ಮೆಣಸಿನ ಕಾಯಿ, ಜೀರಿಗೆ, ಅರಶಿನ, ಹಸಿ ಶುಂಠಿ ಈ ಎಲ್ಲವನ್ನೂ ಸ್ವಲ್ಪ ತರಿ ತರಿಯಾಗಿ ರುಬ್ಬಿಕೊಂಡು ಒಂದು ಪಾತ್ರೆಯಲ್ಲಿ ಇರಿಸಿಕೊಳ್ಳಿ. ನಂತರ ರುಬ್ಬಿದ ಮಿಶ್ರಣಕ್ಕೆ ಕಾರ್ನ್ ಹಿಟ್ಟು , ಅಕ್ಕಿ ಹಿಟ್ಟು, ಬೇಕಿಂಗ್ ಸೋಡಾ , ಕೊತ್ತಂಬರಿ ಸೊಪ್ಪು, ಓಮದ ಕಾಳು ಮಿಶ್ರಣಕ್ಕೆ ಸ್ವಲ್ಪ ಉಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಈ ಮಿಶ್ರಣವನ್ನು ಚಿಕ್ಕ ಚಿಕ್ಕದಾಗಿ ಪಕೋಡಾ ಗಾತ್ರದಲ್ಲಿ ಕಾದ ಎಣ್ಣೆಯಲ್ಲಿ ಕಂದು ಬಣ್ಣ ಬರುವವರೆಗೆ ಕರಿಯಿರಿ. ನಂತರ ಸಾಸ್ ಅಥವಾ ಗ್ರೀನ್ ಚಟ್ನಿ ಜತೆ ಸರ್ವ್ ಮಾಡಿ. -ಪ್ರೀತಿ ವಸಿಷ್ಠ, ಬೆಂಗಳೂರು. raopreeti3@.