ಸಿಹಿ ಕುಂಬಳಕಾಯಿ ಹಲ್ವ ರುಚಿಕರವಾದ ಸಿಹಿ ಕುಂಬಳಕಾಯಿ ಹಲ್ವ... ಪದಾರ್ಥಗಳುಮಾಡುವ ವಿಧಾನ:ಸಿಹಿ ಕುಂಬಳಕಾಯಿಯನ್ನುಸಣ್ಣದಾಗಿ ಹೆಚ್ಚಿಕೊಳ್ಳಬೇಕು. ಬೆಲ್ಲವನ್ನು ಪುಡಿ ಮಾಡಿ ಈಎರಡನ್ನು ಒಂದು ಪಾತ್ರೆಗೆ ಹಾಕಿಒಲೆಯ ಮೇಲೆ 20 ರಿಂದ 25 ನಿಮಿಷಬೇಯಲು ಬಿಡಬೇಕು. ತುಪ್ಪದಲ್ಲಿ ದ್ರಾಕ್ಷಿ ಹಾಗೂ ಗೋಡಂಬಿಯನ್ನು ಕೆಂಪಗೆಹುರಿದಿಟ್ಟುಕೊಳ್ಳಬೇಕು. ನಂತರ ಹುರಿಗಡಲೆ, ಕೊಬ್ಬರಿ,ಏಲಕ್ಕಿಯನ್ನು ಪುಡಿ ಮಾಡಿಟ್ಟುಕೊಂಡು, ಬೆಂದಿರುವಕುಂಬಳಕಾಯಿಯನ್ನು ಕೆಳಗಿಳಿಸಿಕೊಂಡು ಇದಕ್ಕೆ ಹುರಿಗಡಲೆ, ಕೊಬ್ಬರಿಹಾಗೂ ಏಲಕ್ಕಿ ಪುಡಿ ಹಾಕಿಚೆನ್ನಾಗಿ ಮಿಶ್ರಣ ಮಾಡಬೇಕು. ಕೊನೆಯಲ್ಲಿಹುರಿದಿಟ್ಟುಕೊಂಡ ದ್ರಾಕ್ಷಿ, ಗೋಡಂಬಿ ಹಾಗೂ ತುಪ್ಪಹಾಕಿ ಮಿಶ್ರಣ ಮಾಡಿದರೆ ರುಚಿಕರವಾದಕುಂಬಳಕಾಯಿ ಹಲ್ವ ತಯಾರಾಗುತ್ತದೆ.- ಮಂಜುಳ.ವಿ.ಎನ್