ಹುರುಳಿ ಕಟ್ಟಿನ ಸಾರು ಸಾಮಗ್ರಿಗಳು 1. ಹುರುಳಿ- 1 ಪಾವು 2. ಚಕ್ಕೊತನೆ ಸೊಪ್ಪು- 1 ಕಟ್ಟು 3. ತೆಂಗಿನಕಾಯಿ ತುರಿ- 1 ಬಟ್ಟಲು 4. ಹಸಿಮೆಣಸಿನಕಾಯಿ- 5-6 5. ಅಕ್ಕಿಹಿಟ್ಟು- 3/4 ಟೀ. ಚಮಚ 6. ಕೊತ್ತಂಬರಿ ಸೊಪ್ಪು- 1 ಕಪ್ 7. ಸಾರಿನ ಪುಡಿ- 3/4 ಟೀ ಚಮಚ 8. ಎಣ್ಣೆ- 1 ಟೀ ಚಮಚ 9. ಸಾಸಿವೆ- 1 ಟೀ ಚಮಚ 10. ಉಪ್ಪು, ಇಂಗು- ರುಚಿಗೆ ತಕ್ಕಷ್ಟು ಮಾಡುವ ವಿಧಾನ ಹುರುಳಿಯನ್ನು ಬೇಯಿಸಿ, ಚಕ್ಕೊತನೆ ಸೊಪ್ಪನ್ನು ಬೇಯಿಸಿ ಕಾಳನ್ನು ಒಗ್ಗರಣೆ ಮಾಡಿ ಅದರಲ್ಲಿ ಬೇಯಿಸಿ. ಕಾಯಿತುರಿ, ಹಸಿಮೆಣಸಿನಕಾಯಿ, ಅಕ್ಕಿಹಿಟ್ಟು, ಉಪ್ಪು, ಕೊತ್ತಂಬರಿಸೊಪ್ಪು, 1 1/2 ಹಿಡಿ ಬೆಂದ ಕಾಳು ಎಲ್ಲವನ್ನು ಮಿಕ್ಸಿಗೆ ಹಾಕಿ ಬೇಯಿಸಿ. ಬೆಂದ ಹುರುಳಿಗೆ ಪೇಸ್ಟ್ ಹಾಕಿ, ನೀರು ಹಾಕಿ ಕುದಿಸಿ. ತುಪ್ಪ ಕಾಯಿಸಿ, ಸಾಸಿವೆ, ಕರಿಬೇವು ಹಾಕಿ ಒಗ್ಗರಣೆ ಮಾಡಿ ಸಾರಿಗೆ ಕೊಡಿ. - ಶ್ರೀದೇವಿ