ಬೆಂಡೆಕಾಯಿ ರವಾ ಫ್ರೈ - ರುಚಿಕರವಾದ ಬೆಂಡೆಕಾಯಿ ರವಾ ಫ್ರೈ ಮಾಡುವ ವಿಧಾನ... ಬೇಕಾಗುವ ಪದಾರ್ಥಗಳು...ಬೆಂಡೆಕಾಯಿ-20ಖಾರದ ಪುಡಿ- 1 ಚಮಚದನಿಯಾ ಪುಡಿ- 1 ಚಮಚಇಂಗು- ಸ್ವಲ್ಪರವೆ- 1/4 ಬಟ್ಟಲುಉಪ್ಪು-ರುಚಿಗೆ ತಕ್ಕಷ್ಟುಅರಿಶಿನ ಪುಡಿ- ಸ್ವಲ್ಪಎಣ್ಣೆ- ಅಗತ್ಯಕ್ಕೆ ತಕ್ಕಷ್ಟುಜೀರಿಗೆ ಪುಡಿ- ಅರ್ಧ ಚಮಚಮಾಡುವ ವಿಧಾನ...ಮೊದಲಿಗೆ ಬೆಂಡೆಕಾಯಿಯನ್ನು ಚೆನ್ನಾಗಿ ತೊಳೆದು ಒಂದು ಬಟ್ಟೆಯಲ್ಲಿ ನೀರಿನಂಶವನ್ನೆಲ್ಲಾ ಒರೆಸಿಕೊಳ್ಳಿ.ನಂತರ ಇದನ್ನು ಉದ್ದಕ್ಕೆ 4 ಭಾಗವಾಗಿ ಸೀಳಿಕೊಳ್ಳಿ. ನಂತರ ಇದನ್ನು ಒಂದು ಬೌಲ್ ಗೆ ಹಾಕಿ ಅದಕ್ಕೆ ಖಾರದಪುಡಿ, ದನಿಯಾ ಪುಡಿ, ಇಂಗು, ಉಪ್ಪು, ಅರಿಸಿನ ಪುಡಿ, ಜೀರಿಗೆ ಪುಡಿಯನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ. ಇದನ್ನು 15 ನಿಮಿಷಗಳ ಕಾಲ ಹಾಗೇ ಬಿಡಿ.ಬೆಂಡೆಕಾಯಿ ನೀರು ಬಿಡುತ್ತದೆ. ನಂತರ ಒಂದು ತಟ್ಟೆಯಲ್ಲಿ ರವೆ ಇಟ್ಟುಕೊಳ್ಳಿ. ಒಂದು ಅಗಲವಾದ ಪಾತ್ರೆಗೆ ಎಣ್ಣೆ ಹಾಕಿ ಮಸಾಲೆ ಹಾಕಿಟ್ಟುಕೊಂಡ ಬೆಂಡೆಕಾಯಿಯನ್ನು ರವೆಯಲ್ಲಿ ಹೊರಳಿಸಿ ಎಣ್ಣೆ ಹಾಕಿ ಫ್ರೈ ಮಾಡಿಕೊಂಡರೆ ರುಚಿಕರವಾದ ಬೆಂಡೆಕಾಯಿ ರವಾ ಫ್ರೈ ಸವಿಯಲು ಸಿದ್ಧ.