ಮಾವಿನಕಾಯಿ ಪುಳಿಯೊಗರೆ ರುಚಿಕರವಾದ ಮಾವಿನಕಾಯಿ ಪುಳಿಯೊಗರೆ ಮಾಡುವ ವಿಧಾನ... ಬೇಕಾಗುವ ಪದಾರ್ಥಗಳು...ಅನ್ನ- 1 ಬಟ್ಟಲುಮಾವಿನಕಾಯಿ- ತುರಿದದ್ದು ಸ್ವಲ್ಪಒಣಕೊಬ್ಬರಿ- 1 ಚಮಚಬಿಳಿ ಎಳ್ಳು- 1/4 ಚಮಚಜೀರಿಗೆ- 1/4 ಚಮಚಮೆಂತ್ಯೆ- 1/4 ಚಮಚಉದ್ದಿನಬೇಳೆ- 1/4 ಚಮಚಕಡಲೆಬೇಳೆ- 1/4 ಟೀ ಚಮಚಕಾಳುಮೆಣಸು- ಸ್ವಲ್ಪಒಣ ಮೆಣಸಿನ ಕಾಯಿ-4-5ಕರಿಬೇವು-ಸ್ವಲ್ಪಬಿಳಿ ಎಳ್ಳು 1/4 ಟೀ ಚಮಚಒಣಮೆಣಸಿನಕಾಯಿ-2ಕರಿಬೇವು-ಸ್ವಲ್ಪಇಂಗು-ಚಿಟಿಕೆಕಡಲೆ-ಬೇಳೆ ಸ್ವಲ್ಪಉದ್ದಿನ ಬೇಳೆ-ಸ್ವಲ್ಪಕಡಲೆಕಾಯಿ ಬೀಜ-ಸ್ವಲ್ಪಅರಿಶಿಣ-ಸ್ವಲ್ಪಸಾಸಿವೆ-ಸ್ವಲ್ಪಎಣ್ಣೆ - 3 ಚಮಚಉಪ್ಪು- ರುಚಿಗೆ ತಕ್ಕಷ್ಟುಕೊತ್ತಂಬರಿ ಸೊಪ್ಪು- ಸ್ವಲ್ಪಮಾಡುವ ವಿಧಾನ...ಮೊದಲು ಬಾಣಲೆಗೆ ಒಣಕೊಬ್ಬರಿ, ಬಿಳಿ ಎಳ್ಳು, ಜೀರಿಗೆ, ಮೆಂತ್ಯ, ಉದ್ದಿನಬೇಳೆ, ಕಡಲೆಬೇಳೆ, ಕಾಳುಮೆಣಸು, ಒಣ ಮೆಣಸಿನಕಾಯಿ, ಕರಿಬೇವು ಎಲ್ಲವನ್ನೂ ಸೇರಿಸಿ ಚೆನ್ನಾಗಿ ಹುರಿಯಬೇಕು. ತಣ್ಣಗಾದ ನಂತರ ಮಿಕ್ಸಿಯಲ್ಲಿ ರುಬ್ಬಿ ಪುಡಿ ಮಾಡಿಕೊಳ್ಳಬೇಕು. ನಂತರ ಅದೇ ಮಿಕ್ಸಿಗೆ ತುರಿದ ಮಾವಿನ ಕಾಯಿ ಹಾಗೂ ಸ್ವಲ್ಪ ನೀರು ಸೇರಿಸಿ ರುಬ್ಬಿಕೊಂಡು ಮಿಶ್ರಣ ತಯಾರಿಸಿಕೊಳ್ಳಬೇಕು.ಬಳಿಕ ಒಗ್ಗರಣೆ ಮಾಡಲು ಬಾಣಲಿಗೆ ಎಣ್ಣೆ, ಸಾಸಿವೆ, ಒಣ ಮೆಣಸು, ಕಡಲೆ ಬೇಳೆ, ಕಡಲೆಬೀಜ, ಉದ್ದಿನ ಬೇಳೆ ಹಾಕಿ ಬೇಯಿಸಬೇಕು. ಕೆಂಪಗಾದ ನಂತರ ಬಿಳಿ ಎಳ್ಳು, ಅರಿಶಿಣ, ರುಬ್ಬಿಕೊಂಡ ಮಾವಿನಕಾಯಿ ಮಿಶ್ರಣವನ್ನು ಹಾಕಿ ಚೆನ್ನಾಗಿ ಕುದಿಸಿ. ಮಿಶ್ರಣ ಬೆಂದ ಮೇಲೆ ಕರಿ ಬೇವು ಹಾಕಿ ಕೈಯಾಡಿಸಿ.ನಂತರ ಉಪ್ಪು, ಅನ್ನ ಹಾಕಿ ಕಲಸಿಕೊಳ್ಳಿ. ಬಳಿಕ ಕೊತ್ತಂಬರಿ ಸೊಪ್ಪನ್ನು ಹಾಕಿ ಮಿಶ್ರಣ ಮಾಡಿದರೆ, ರುಚಿಕರವಾದ ಮಾವಿನಕಾಯಿ ಪುಳಿಯೋಗರೆ ಸವಿಯಲು ಸಿದ್ಧ.