ಕಡಲೆಪುರಿ ಬಾತ್ ರುಚಿಕರವಾದ ಕಡಲೆಪುರಿ ಬಾತ್... ಸಾಮಾಗ್ರಿಗಳು: ಮಾಡುವ ವಿಧಾನ:ಹುರಿಗಡಲೆ,ಬೆಳ್ಳುಳ್ಳಿ, ಖಾರದಪುಡಿ, ಉಪ್ಪು1/2 ಚಮಚ ಎಲ್ಲವನ್ನು ಮಿಕ್ಸಿಜಾರ್ ಗೆ ಹಾಕಿ ಪುಡಿಮಾಡಿಟ್ಟುಕೊಳ್ಳಬೇಕು. ನಂತರ ಸ್ವಚ್ಛಗೊಳಿಸಿದ ಕಡಲೆಪುರಿಯನ್ನುನೀರಿನಲ್ಲಿ ನೆನೆಸಿ, ನೀರು ಇಲ್ಲದಂತೆಹಿಂಡಿ ಒಂದು ಪಾತ್ರೆಯಲ್ಲಿ ಹಾಕಿಟ್ಟುಕೊಳ್ಳಬೇಕು.ಬಾಣಲೆಗೆ ಎಣ್ಣೆ ಹಾಕಿ ನಂತರಸಾಸಿವೆ, ಕರಿಬೇವು ಹಾಕಬೇಕು ಕೆಂಪಗಾಗುತ್ತಿದ್ದಂತೆಯೇಹೆಚ್ಚಿಟ್ಟುಕೊಂಡ ಈರುಳ್ಳಿ ಹಾಕಿ ಚಿನ್ನದಬಣ್ಣ ಬರುವವರೆಗೂ ಬಿಡಬೇಕು. ಟೊಮ್ಯಾಟೋ ಹಾಕಿ ಬೆಂದ ನಂತರಈ ಮೊದಲೇ ಮಾಡಿಟ್ಟುಕೊಂಡಿದ್ದಹುರಿಗಡಲೆ ಪುಡಿ ಹಾಗೂ ಉಪ್ಪನ್ನುಹಾಕಿ 2 ನಿಮಿಷ ಕೈಯಾಡಿಸಬೇಕು. ಇದಾದಮೇಲೆ ನೆನೆಸಿಟ್ಟುಕೊಂಡಿದ್ದ ಕಡಲೆಪುರಿಯನ್ನು ಹಾಕಿ ಚೆನ್ನಾಗಿ ಮಿಶ್ರಣಮಾಡಿ ಕೊನೆಯಲ್ಲಿ ಸಣ್ಣದಾಗಿ ಹೆಚ್ಚಿಕೊಂಡ ಕೊತ್ತಂಬರಿ ಸೊಪ್ಪನ್ನು ಹಾಕಿ ಒಂದೆರಡು ನಿಮಿಷಒಲೆಯ ಮೇಲೆ ಬಿಸಿಯಾಗಲು ಬಿಟ್ಟರೆ ಕಡಲೆಪುರಿ ಬಾತ್ ತಿನ್ನಲು ಸಿದ್ಧವಾಗುತ್ತದೆ.- ಮಂಜುಳ.ವಿ.ಎನ್