ಈರುಳ್ಳಿ ಮಂಚೂರಿ ರುಚಿಕರವಾದ ಈರುಳ್ಳಿ ಮಂಚೂರಿ ಮಾಡುವ ವಿಧಾನ... ಬೇಕಾಗುವ ಪದಾರ್ಥಗಳುಈರುಳ್ಳಿ (ಸಣ್ಣಗೆ-ಉದ್ದಕ್ಕೆ ಹೆಚ್ಚಿದ್ದು)- 4ಅಚ್ಚ ಖಾರದ ಪುಡಿ- 1 ಚಮಚಉಪ್ಪು- ರುಚಿಗೆ ತಕ್ಕಷ್ಟುಶುಂಠಿ-ಬೆಳ್ಳುಳ್ಳಿ ಪೇಸ್ಟ್- 1 ಚಮಚಕಾರ್ನ್ ಫ್ಲೋರ್- 2 ಚಮಚಮೈದಾ ಹಿಟ್ಟು- 3 ಚಮಚಎಣ್ಣೆ-ಸ್ವಲ್ಪಶುಂಠಿ-ಬೆಳ್ಳುಳ್ಳಿ - ಸಣ್ಣಗೆ ಹೆಚ್ಚಿದ್ದು ಸ್ವಲ್ಪಸ್ಪ್ರಿಂಗ್ ಆನಿಯನ್- ಸ್ವಲ್ಪ (ಸಣ್ಣಗೆ ಹೆಚ್ಚಿದ್ದುಸೋಯಾ ಸಾಸ್- ಅರ್ಧ ಚಮಚಚಿಲ್ಲಿ ಸಾಸ್- 1 ಚಮಚಟೊಮೆಟೋ ಸಾಸ್- 2 ಚಮಚಮಾಡುವ ವಿಧಾನ...ಮೊದಲಿಗೆ ಒಂದು ಪಾತ್ರೆಯಲ್ಲಿ ಸಣ್ಣಗೆ ಹೆಚ್ಚಿದ ಈರುಳ್ಳಿ, ಖಾರದ ಪುಡಿ, ಉಪ್ಪು ಎಲ್ಲವನ್ನು ಚೆನ್ನಾಗಿ ಮಿಶ್ರಣ ಮಾಡಿ 20 ನಿಮಿಷ ನೆನೆಯಲು ಬಿಡಿ.ನಂತರ ಇದಕ್ಕೆ ಮೈದಾ ಹಿಟ್ಟು, ಕಾರ್ನ್ ಫ್ಲೋರ್, ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಹಾಕಿ ನೀರನ್ನು ಚುಮುಕಿಸಿಕೊಂಡು ಸಣ್ಣ ಸಣ್ಣ ಉಂಡೆಗಳನ್ನಾಗಿ ಮಾಡಿಕೊಳ್ಳಿ. ಒಲೆಯ ಮೇಲೆ ಬಾಣಲೆಯಿಟ್ಟು, ಎಣ್ಣೆ ಹಾಕಿ. ಕಾದ ನಂತರ ಉಂಡೆಗಳನ್ನು ಹಾಕಿ ಚಿನ್ನದ ಬಣ್ಣ ಬರುವವರೆಗೆ ಕರಿದಿಟ್ಟುಕೊಳ್ಳಿನಂತರ ಒಲೆಯ ಮೇಲೆ ಬಾಣಲೆ ಇಟ್ಟು ಅದಕ್ಕೆ ಸ್ವಲ್ಪ ಎಣ್ಣೆ ಹಾಕಿ. ಇದೀಗ ಸಣ್ಣಗೆ ಕತ್ತರಿಸಿಕೊಂಡ ಶುಂಠಿ ಹಾಗೂ ಬೆಳ್ಳುಳ್ಳಿ, ಸ್ಪ್ರಿಂಗ್ ಆನಿಯನ್ ಹಾಕಿ ಕೆಂಪಗೆ ಹುರಿದುಕೊಳ್ಳಿ. ಇದಕ್ಕೆ ಸಾಸ್ ಹಾಗೂ ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಮಿಶ್ರಣ ಮಾಡಿ. ನಂತರ ಸ್ವಲ್ಪ ನೀರಿಗೆ ಕಾರ್ನ್ ಫ್ಲೋರ್ ಮಿಶ್ರಣ ಮಾಡಿಕೊಳ್ಳಿ ಸ್ಲರಿಯನ್ನು ಸಿದ್ಧಪಡಿಸಿಕೊಳ್ಳಿ.ಇದೀಗ ಈ ಮಿಶ್ರಣವನ್ನು ಮಸಾಲೆಯೊಂದಿಗೆ ಸೇರಿಸಿ ಚೆನ್ನಾಗಿ ಕುದಿಯಲು ಬಿಡಿ. ಮಸಾಲೆ ಗಟ್ಟಿಯಾಗುತ್ತಿದ್ದಂತೆ ಈಗಾಗಲೇ ಎಣ್ಣೆಯಲ್ಲಿ ಫ್ರೈ ಮಾಡಿಕೊಂಡ ಉಂಡೆಗಳನ್ನು ಹಾಗೂ ಸ್ವಲ್ಪ ಸ್ಪ್ರಿಂಗ್ ಆನಿಯನ್ ನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿದರೆ ರುಚಿಕರವಾದ ಈರುಳ್ಳಿ ಮಂಚೂರು ಸವಿಯಲು ಸಿದ್ಧ.