ಆಲೂ ಪೋಹಾ ಬೋಂಡಾ - ರುಚಿಕರವಾದ ಆಲೂ ಪೋಹಾ ಬೋಂಡಾ ಮಾಡುವ ವಿಧಾನ... ಬೇಕಾಗುವ ಪದಾರ್ಥಗಳು...ಬೇಯಿಸಿದ ಆಲೂಗಡ್ಡೆ-ಮಧ್ಯಮ ಗಾತ್ರ 1ಕಡಲೆಹಿಟ್ಟು-ಸ್ವಲ್ಲಅಕ್ಕಿಹಿಟ್ಟು- 1 ಚಮಚಪೇಪರ್ ಅವಲಕ್ಕಿ- 1/2 ಬಟ್ಟಲುಅಚ್ಚ ಖಾರದ ಪುಡಿ- ಅರ್ಧ ಚಮಚಅರಿಶಿನದ ಪುಡಿ- ಅರ್ಧ ಚಮಚಬಿಳಿ ಎಳ್ಳು 1 ಚಮಚಉಪ್ಪು- ರುಚಿಗೆ ತಕ್ಕಷ್ಟುಎಣ್ಣೆ- ಅಗತ್ಯವಿರುವಷ್ಟುಮಾಡುವ ವಿಧಾನ...ಬೇಯಿಸಿದ ಆಲೂಗಡ್ಡೆಯನ್ನು ಗಂಟಿಲ್ಲದೆ ಪುಡಿಮಾಡಿಕೊಳ್ಳಿ. ಪೇಪರ್ ಅವಲಕ್ಕಿಯನ್ನು ನೀರಿನಲ್ಲಿ ತೊಳೆದು,ಬಸಿದು ಆಲೂ ಪುಡಿಯೊಂದಿಗೆ ಸೇರಿಸಿ, ಎಳ್ಳು, ಉಪ್ಪು ಹಾಕಿ ಮಿಶ್ರಣ ಮಾಡಿ, ಸಣ್ಣ ಉಂಡೆಗಳನ್ನಾಗಿ ಮಾಡಿಕೊಳ್ಳಿ.ಇದೀಗ ಒಂದು ಪಾತ್ರೆಗೆ ಕಡಲೆಹಿಟ್ಟು, ಅಕ್ಕಿ ಹಿಟ್ಟು, ಅಚ್ಚ ಖಾರದ ಪುಡಿ ಹಾಗೂ ಅರಿಶಿನ, ಉಪ್ಪು ಹಾಗೂ ಸ್ವಲ್ಪ ನೀರು ಗಟ್ಟಿಯಾಗಿ ಮಿಶ್ರಣ ಮಾಡಿಕೊಳ್ಳಿ. ಒಲೆಯ ಮೇಲೆ ಎಣ್ಣೆ ಇಟ್ಟು ಬಿಸಿ ಮಾಡಿ.ಗಟ್ಟಿಯಾಗಿ ಕಲೆಸಿದ ಹಿಟ್ಟಿಗೆ ಉಂಡೆಗಳನ್ನು ಅದ್ದಿ, ಕಾದ ಎಣ್ಣೆಗೆ ಹಾಕಿ ಚಿನ್ನದ ಬಣ್ಣ ಬರುವವರೆಗೆ ಕರಿದರೆ ರುಚಿಕರವಾದ ಆಲೂ ಪೋಹಾ ಬೋಂಡಾ ಸವಿಯಲು ಸಿದ್ಧ.